ನವದೆಹಲಿ: ಕೇಂದ್ರ ಸಚಿವ ಕುಮಾರಸ್ವಾಮಿ ಯವರು ಒಳ್ಳೆಯ ವಿಚಾರದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದಾರೆ ಎಂದು ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಜತೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರ ಆರೋಪಗಳಿಗೆ ಕಾಲವೇ ಉತ್ತರಿಸಲಿದೆ ಎಂದು ಹೇಳಿದರು.
ಕುಮಾರಸ್ವಾಮಿ ಅವರು ಹೇಳಿದಂತೆ ಅದೇನು ದಾಖಲೆಗಳಿವೆಯೋ ಅದನ್ನು ತರಿಸಿ ಅವರಿಗೆ ತಿಳಿಸುತ್ತೇನೆ. ತನಿಖೆ ಮಾಡಲು ಯಾರಿಗೋ ನೀಡಬೇಕು ಎಂದು ಹೇಳಿದ್ದಾರಲ್ಲ, ಅವರಿಗೆ ದಾಖಲೆಗಳನ್ನು ಕೊಡಲಿ ಎಂದು ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.
