
(ವರದಿ:ಎನ್.ಎಂ.ಸುರೇಶ್)
ರಾಮನಗರ: ಬಿಡದಿಯ ರೈತರ ಹೋರಾಟವನ್ನ ಗಮನಿಸ್ತಿದ್ದೇನೆ.
ಈ ಹೋರಾಟದಲ್ಲಿ ಭಾಗಿಯಾದರಿಗೆಲ್ಲ ಅಭಿನಂದಿಸುತ್ತೇನೆ ಎಂದು ಮಾಜಿ ಪ್ರಧಾನಿ ಗಳು,ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ಹೇಳಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬಿಡದಿಯ ಬಿಜಿಎಸ್ ವೃತ್ತದಿಂದ ಆರಂಭವಾದ 2 ನೆ ದಿನದ ಬಿಡದಿ ಪಾದಯಾತ್ರೆಗೆ ಹೆಚ್. ಡಿ ದೇವೇಗೌಡರು ಚಾಲನೆ ನೀಡಿ ಮಾತನಾಡಿ,
ನಿಖಿಲ್ ನೇತೃತ್ವದಲ್ಲಿ ರೈತರ ಪರ ಹೋರಾಟ ಆಗುತ್ತಿದೆ,ಕುಮಾರಸ್ವಾಮಿ ಕೇಂದ್ರದ ಜವಾಬ್ದಾರಿ ನಿರ್ವಹಣೆ ಜೊತೆಗೆ ರೈತರ ಪರವಾಗಿ ನಿಂತಿದ್ದಾರೆ ಎಂದು ತಿಳಿಸಿದರು.
ಒಕ್ಕಲಿಗರು ಸಿಎಂ ಆದ್ರೆ ನಾವು ಸಹಿಸೋದಿಲ್ಲ ಅಂತೀರಿ,ಆದ್ರೆ ಯಾರೇ ಸಿಎಂ ಆಗಿರಲಿ ಒಳ್ಳೆಕೆಲಸ ಮಾಡಿದರೆ ಬೆಂಬಲಿಸುತ್ತೇವೆ,
ನಿಮಗೆ ಇನ್ನೂ ಎರಡು ವರ್ಷ ಅಧಿಕಾರ ಇದೆ, ಆಡಳಿತ ಮಾಡಿ,ಆದರೆ ಸುಳ್ಳು ರಾಜಕಾರಣ ಯಾಕೆ ಮಾಡ್ತೀರಿ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ 2006ರಲ್ಲಿ ಮಾಡಿದ ನಿರ್ಣಯ ನಾವು ಜಾರಿ ಮಾಡುತ್ತೇವೆ ಅಂತ ಈಗಿನ ಸಿಎಂ ಹೇಳ್ತಾರೆ.
ಕಾಂಗ್ರೆಸ್ ನಲ್ಲಿ ಅಧ್ಯಕ್ಷರಾಗಿದ್ದವರು ನೀವು ಈಗ ಅಧಿಕಾರಕ್ಕೆ ಬಂದು ರೈತರನ್ನ ನೇಣು ಹಾಕಲು ಹೊರಟಿದ್ದೀರಿ ಎಂದು ದೊಡ್ಡಗೌಡರು ಗುಡುಗಿದರು.
ಕುಮಾರಸ್ವಾಮಿ ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ಐದು ಟೌನ್ ಶಿಪ್ ಮಾಡಲು ತೀರ್ಮಾನಿಸಿದ್ರು.
ರೈತರ ವಿರೋಧ ಬಂದ ತಕ್ಷಣ ಯೋಜನೆ ಕೈಬಿಟ್ರು.ಆದರೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿ ಅಸತ್ಯ ಹೇಳಿ ರೈತರ ಮನೆ ಹಾಳು ಮಾಡ್ತಾ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ರೈತರು ಕಡಿಮೆ ಜಮೀನು ಇಟ್ಕೊಂಡು ಸ್ವಾಭಿಮಾನದ ಜೀವನ ಮಾಡ್ತಿದ್ದಾರೆ.
ಇಂತಹ ರೈತರ ಹೊಟ್ಟೆಯ ಮೇಲೆ ಹೊಡೆದು ಯಾರಿಗೋಸ್ಕರ ಟೌನ್ ಶಿಪ್ ಮಾಡ್ತಿದ್ದೀರಿ.
ಬೆಂಗಳೂರಿನಲ್ಲೇ ಸಹಸ್ರಾರು ಸೈಟ್ ಖಾಲಿ ಬಿದ್ದಿವೆ.ಅಲ್ಲಿ ಅದನ್ನ ತೆಗೆದುಕೊಳ್ಳುವವರೇ ಯಾರು ಇಲ್ಲ.
ಕಟ್ಟಿರುವ ಸಾಕಷ್ಟು ಮನೆಗಳೇ ಖಾಲಿ ಇವೆ.
ಈಗ ಸಿಎಂ ಕಮಿಟಿ ರಚನೆ ಮಾಡಿದ್ದಾರಲ್ಲ.
ಮೊದಲು ಬೆಂಗಳೂರಿನ ಖಾಲಿ ಇರುವ ಸೈಟ್ ಗಳ ಅಂಕಿಅಂಶ ಪರಿಶೀಲನೆ ಮಾಡಲಿ
ಇಲ್ಲಿ ಬಂದು ರೈತರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ದೇವೇಗೌಡರು ತಾಕೀತು ಮಾಡಿದರು.
ಮೊನ್ನೆವರೆಗೂ 2ಕೋಟಿ ಇದ್ದ ಬೆಲೆ ಈಗ ಮೂರು ಕೋಟಿ ಅಂತೀರಿ
ಬಡವರ ಹೊಟ್ಟೆ ಮೇಲೆ ಹೊಡೆದು ಯಾಕೆ ಯೋಜನೆ ಮಾಡ್ತೀರಿ.
ಬಿಡದಿಯ ಯಾರಾದರೂ ಟೌನ್ ಶಿಪ್ ಬೇಕು ಅಂತ ಅರ್ಜಿ ಹಾಕಿದ್ದಾರಾ, ಡಿಕೆಶಿ ಅವ್ರೇ ರಾಜ್ಯ ಆಳಿ ನಮ್ಮದೇನು ತಕರಾರು ಇಲ್ಲ.
ಆದರೆ ರೈತರ ಹೊಟ್ಟೆ ಮೇಲೆ ಹೊಡೆಯಲು ಬಿಡಲ್ಲ ಎಂದು ದೇವೇಗೌಡರು ಕಠಿಣ ಎಚ್ಚರಿಕೆ ನೀಡಿದರು.
ಕಿಂಚಿತ್ತೂ ರೈತರ ಭೂಮಿ ಸ್ವಾಧೀನ ಮಾಡಲು ಬಿಡಲ್ಲ,ನನಗೆ ವಯಸ್ಸಾಗಿದೆ, ನನ್ನ ಬುದ್ದಿಗೆ ವಯಸ್ಸಾಗಿಲ್ಲ,ಈ ವಯಸ್ಸಿನಲ್ಲೂ ಹೋರಾಟ ಮಾಡುವ ಶಕ್ತಿ ಇದೆ.
ಆ.19ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಸಭೆ ಇದೆ.
ಯಾರೂ ಹೆದರಬೇಡಿ, ಮಾನಸಿಕವಾಗಿ ಹೋರಾಟಕ್ಕೆ ಸಿದ್ಧರಾಗಿ ಎಂದು ಗೌಡರು ಕರೆ ನೀಡಿದರು.
ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ:
ನೀವು ಸಿಎಂ ಆಗಿದ್ದಕ್ಕೆ ನಾವು ಹೊಟ್ಟೆಕಿಚ್ಚು ಪಟ್ಟಿಲ್ಲ ಡಿ.ಕೆ.ಶಿವಕುಮಾರ್ ಅವರೆ, ದೇವೇಗೌಡರೇ ನಿಮಗೆ ಒಳ್ಳೆಯ ಕೆಲಸ ಮಾಡಿ ಅಂತ ಹರಿಸಿದ್ದಾರೆ ತಿಳಿಯಿರಿ ಎಂದು ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಈಗ ನೀವೆ ಸಿಎಂ ಆಗಿದ್ದೀರಿ.
ಒಕ್ಕಲಿಗ ಸಿಎಂ ಆದ್ರೆ ನಮ್ಮ ಕುಟುಂಬ ಸಹಿಸಲ್ಲ ಅಂತೀರಿ.
ಆದರೆ ನೀವು ಸಿಎಂ ಆಗಿ ಪೆನ್ನು, ಪೇಪರನ್ನ ಯಾರ ಪರ ಬಳಸ್ತೀರಿ.
33 ಸಾವಿರ ಕೋಟಿ ಹಣ ಮಾಡಲು ಪೆನ್ನು ಪೇಪರ್ ಬಳಸ್ತಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.
ಕನಕಪುರದಲ್ಲಿ ರೈತರಿಗೆ ಜಮೀನು ಮಾರಬೇಡಿ ಅಂತೀರಿ.
ಇಲ್ಲಿ ನೀವೇ ರೈತರ ಜಮೀನು ಕಬಳಿಸ್ತೀರಿ.
ನಮ್ಮ ಹೋರಾಟಕ್ಕೆ ಸರ್ಕಾರ ಹೆದರಿದೆ.
ಅದಕ್ಕಾಗಿ ಕೋಟ್ಯಾಂತರ ರೂ ಖರ್ಚು ಮಾಡಿ ಜಾಹಿರಾತು ಕೊಟ್ಟಿದ್ದಾರೆ.
ನಿನ್ನೆ ಭೂಮಿಗೆ 3 ಕೋಟಿ ಹಣ ಕೊಡ್ತೀನಿ ಅಂತ ಹೇಳಿದ್ದೀರಿ. ಹಿಂದೆ 2ಕೋಟಿ ಕೊಡ್ತೀನಿ ಅಂದವರು ಈಗ ಯಾಕೆ ದಿಢೀರ್ ಅಂತ 3 ಕೋಟಿಗೆ ಏರಿಸಿದ್ರಿ
ಯೋಜನೆ ಮಾಡಲು ನಿಮ್ಮ ಬಳಿ ಹಣ ಇದೆಯಾ ಇದ್ರೆ ದಾಖಲೆ ತೋರಿಸಿ ಎಂದು ನಿಖಿಲ್ ಸವಾಲು ಹಾಕಿದರು.
ಸರ್ಕಾರ ಹೆದರಿ ನಮ್ಮ ಪಾದಯಾತ್ರೆ ತಡೆಯಲು ಮುಂದಾಗಿದೆ,ಪೊಲೀಸರ ಮೇಲೂ ಒತ್ತಡ ಹಾಕ್ತಿದೆ ಎಂದು ಆರೋಪಿಸಿದರು.
ನೀವು ಮೇಕೆದಾಟು ಪಾದಯಾತ್ರೆ ಮಾಡಿದ್ದು, ಕಾನೂನು ಬಾಹಿರವಾ,ಯಾಕೆ ಬೆಂಗಳೂರು ಸಿಟಿಯಲ್ಲಿ ಪಾದಯಾತ್ರೆ ಮಾಡಿದ್ದಿರಿ ಎಂದು
ಸರ್ಕಾರವನ್ನು ನಿಖಿಲ್ ಪ್ರಶ್ನಿಸಿದರು.
ಇಂದಿನ ಪಾದಯಾತ್ರೆಯಲ್ಲಿ ಮಾಜಿ ಸಚಿವ ಪುಟ್ಟರಾಜು, ಡಿ.ಸಿ ತಮ್ಮಣ್ಣ,
ಶಾಸಕರಾದ ಬಾಲಕೃಷ್ಣ,ಜಿ ಡಿ ಹರೀಶ್ ಗೌಡ, ಶರಣ್ ಗೌಡ ಕಂದಕೂರ್ , ಸ್ವರೂಪ್ ಪ್ರಕಾಶ್ , ಸುರೇಶ್ ಬಾಬು, ರವಿಕುಮಾರ್ ಮಾಜಿ ಶಾಸಕರಾದ ಎ ಮಂಜು, ಡಾ. ಅನ್ನದಾನಿ, ನಿಸರ್ಗ ನಾರಾಯಣಸ್ವಾಮಿ ಕೋರ್ ಕಮಿಟಿ ಅಧ್ಯಕ್ಷರಾದ ಜೆ.ಕೆ ಕೃಷ್ಣಾರೆಡ್ಡಿ,ವಿಧಾನ ಪರಿಷತ್ ಸದಸ್ಯರಾದ ಭೋಜೆಗೌಡ, ಸೂರಜ್ ಸೋನಿ ನಾಯಕ್, ಮೈಸೂರು ಜಿಲ್ಲಾಧ್ಯಕ್ಷರಾದ ಅಶ್ವಿನ್ ಕುಮಾರ್, ಸುಧಾಕರ್ ಶೆಟ್ಟಿ, ಜಯಮುತ್ತು ರಶ್ಮಿರಾಮೇಗೌಡ.ಹರೀಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಜೈ ಮತ್ತು, ರಾಮನಗರ ತಾಲೂಕು ಅಧ್ಯಕ್ಷ ಶಿವಲಿಂಗಯ್ಯ ಕರಿಯಮ್ಮಾಜಿ, ರವಿಕುಮಾರ್, ಪೈಲ್ವಾನ್ ಪುಟ್ಟರಾಜು , ದಿಶಾ ಕಮಿಟಿ ಸದಸ್ಯ ರಾಜೇಶ್, ಸ್ಟುಡಿಯೋ ಚಂದ್ರು ಮತ್ತಿತರರು ಪಾಲ್ಗೊಂಡಿದ್ದರು.
