ಮಂತ್ರಾಲಯ: ರಾಯರ ನೆನೆಯಮ್ಮ,ಗುರು ರಾಯರ ನೆನೆಯಮ್ಮ…ಈ ಗೀತೆಯನ್ನ ಎಲ್ಲರೂ ಮನಸಾರೆ ಗುನುಗುತ್ತಾರೆ.
ರಾಯರು ಸ್ಮರಣೆ ಹಾಗೇನೆ..ಮನಸಿಗೆ ಏನೋ ಸಮಾಧಾನ ಸಿಗುತ್ತೆ.ಬಡವ,ಬಲ್ಲಿದ,ಸೆಲೆಬ್ರಿಟಿ ಹೀಗೆ ಎಲ್ಲರೂ ಗುರು ರಾಯರ ಅನುಗ್ರಹ ಬಯಸುವವರೇ.
ಇದೀಗ ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಖ್ಯಾತ ನಟರುಗಳಾದ ರಿಷಬ್ ಶೆಟ್ಟಿ, ಜಗ್ಗೇಶ್ ಸೇರಿದಂತೆ ಅನೇಕರು ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾದರು.
ಈ ವೇಳೆ ರಿಷಬ್ ಶೆಟ್ಟಿ ಅವರಿಗೆ ಶ್ರೀ ಸುಬುದೇಂದ್ರ ತೀರ್ಥ ಸ್ವಾಮಿಗಳು ಶಾಲು ಹೊದಿಸಿ ಮಂತ್ರಾಕ್ಷತೆ ನೀಡಿ ಹಾರೈಸಿದರು.
ಈ ಸಂದರ್ಭದಲ್ಲಿ ಮನದಾಳದ ಮಾತುಗಳನ್ನಾಡಿದ ರಿಷಬ್ ಶಟ್ಟಿ ಅವರು, ರಾಯರಲ್ಲಿ ನಮ್ಮ ತಾಯಿ ಹರಕೆ ಹೊತ್ತಿದ್ದರಿಂದ ತಾವು ಗುರುವಾರವೇ ಜನಿಸಿದ್ದು ಎಂದು ಹೇಳಿದರು.
ಆಗ ನಾನು ಹುಟ್ಟಿರಲಿಲ್ಲವಂತೆ, ನಮ್ಮ ಮನೆ ತುಂಬಾ ಕಷ್ಟದಲ್ಲಿ ಇದ್ದಂತಹ ಕಾಲ,ಮಗು ಹುಟ್ಟಲಿ, ಅವನು ಹುಟ್ಟಿದ ಮೇಲೆ ಒಳ್ಳೆಯದಾಗಲಿ ಅಂತ ರಾಯರಲ್ಲಿ ನಮ್ಮ ತಾಯಿ ಹರಕೆ ಹೊತ್ತುಕೊಂಡರಂತೆ, ಆನಂತರ ನಾನು ಹುಟ್ಟಿದ್ದು.ಅದೂ ಕೂಡಾ ನಾನು ಗುರುವಾರವೇ ಜನಿಸಿದ್ದು ವಿಶೇಷ ಎಂದು ಹೇಳಿದ್ದಾರೆ.
ಏನೇ ಕಷ್ಟ ಬಂದರೂ ರಾಯರಿಂದ ಒಳ್ಳೆಯದಾಗತ್ತೆ ಅಂತ ನಮ್ಮ ತಾಯಿ ಹೇಳುತ್ತಾರೆ. ಶೂಟಿಂಗ್ ವೇಳೆ ಏನೇ ಸಮಸ್ಯೆ ಬಂದರೂ ರಾಯರನ್ನು ನೆನಪಿಸಿಕೊಳ್ಳುತ್ತೇನೆ ಪರಿಹಾರ ಸಿಗುತ್ತೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
