ಟೆಲ್ ಅವಿವ್: ಇಸ್ರೇಲ್ಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯ ಬರಮಾಡಿಕೊಳ್ಳಲಾಯಿತು.
ಮೋದಿ ಅವರು ಬುಧವಾರ ಸಂಜೆ ಇಸ್ರೇಲ್ ಟೆಲ್ ಅವಿವ್ಗೆ ತಲುಪಿದ್ದಾರೆ. ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಪ್ಪುಗೆ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ ನೆತನ್ಯಾಹು ಅವರ ಪತ್ನಿ ಬೆನ್ ಗುರಿಯನ್ ಕೂಡ ಹಾಜರಿದ್ದರು.
ಈ ಹಿಂದೆ 2017ರಲ್ಲಿ ಮೋದಿ ಅವರು ಇಸ್ರೇಲ್ಗೆ ಭೇಟಿ ನೀಡಿದ್ದರು.ಇದು ಎರಡನೆ ವಿಸಿಟ್.
