ಬೆಂಗಳೂರು: ಗುಬ್ಬಿವಾಣಿ ಟ್ರಸ್ಟ್ ವತಿಯಿಂದ ಈ ವರ್ಷದ ಮಹಿಳಾ ದಿನಾಚರಣೆ ಅಂಗವಾಗಿ, ಕರ್ನಾಟಕದ ಪ್ರತೀ ಜಿಲ್ಲೆಯಿಂದ 4-5 ಮಹಿಳೆಯರನ್ನು (ಒಟ್ಟು 100) ಮಹಿಳೆಯರನ್ನು ಗುರುತಿಸುವ ಯೋಜನೆ
ಹಮ್ಮಿಕೊಳ್ಳಲಾಗಿದೆ.
ಪರಿಚಯವಿರುವ ಅಥವಾ ಜಿಲ್ಲೆಯ ಐದು ಮಹಿಳೆಯರ ಹೆಸರುಗಳನ್ನು ಶಿಫಾರಸ್ಸು ಮಾಡಬೇಕು ಅದರಲ್ಲೂ ಫೆಬ್ರುವರಿ 14 ರೊಳಗೆ ಶಿಫಾರಸು ಮಾಡಬೇಕಿದೆ.
ಈ ಮಹಿಳೆಯರು ಈಗಾಗಲೇ ದೊಡ್ಡ ಸೆಲೆಬ್ರಿಟಿಗಳಾಗಿಲ್ಲದಿರಬಹುದು; ಮುಖ್ಯವಾಗಿ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸುವುದು ನಮ್ಮ ಉದ್ದೇಶವಾಗಿದೆ ಶಾಂತಲಾ ದಾಮ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಾಹರಣೆಗೆ—ಕೃಷಿಯಲ್ಲಿ ಸಕ್ರಿಯವಾಗಿರುವ ರೈತ ಮಹಿಳೆಯರು, ಹೈನುಗಾರಿಕೆ, ಮೀನುಗಾರಿಕೆ, ವಿವಿಧ ಗ್ರಾಮೀಣ ಜೀವನೋಪಾಯ ಮಾರ್ಗಗಳಲ್ಲಿ ಮುಖ್ಯ ವೃತ್ತಿಯಾಗಿ ತೊಡಗಿಸಿಕೊಂಡವರು, ಕ್ರೀಡಾ ಕೋಚ್ಗಳು, ಸ್ವಂತ ಉದ್ಯಮ ಹೊಂದಿರುವವರು,ಅಥವಾ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರು ಅಥವಾ ಇನ್ನಿತರ ರೀತಿಯಲ್ಲಿ ಸಾಧನೆ ಮಾಡಿರುವ ಮಹಿಳೆಯರ ಹೆಸರನ್ನು ಶಿಫಾರಸು ಮಾಡಬಹುದಾಗಿದೆ.
ಏನಾದರೂ ಪ್ರಶ್ನೆಗಳಿದ್ದಲ್ಲಿ 8867747236
ಕರೆ ಅಥವಾ ವಾಟ್ಸಾಪ್ ಮಾಡಬಹುದು ಎಂದು ಶಾಂತಲಾ ದಾಮ್ಲೆ ಮನವಿ ಮಾಡಿದ್ದಾರೆ.
