ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಂಗಳೂರು ನಗರ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ರಾಷ್ಟ್ರೀಯ ಯುವ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಭಾರತ್ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಮಂತ್ರಾಲಯದ ನಿವೃತ್ತ ಪ್ರಾಂತ್ಯ ನಿರ್ದೇಶಕ ಎಂ ಎನ್ ನಟರಾಜ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಭಾರತದಲ್ಲಿ ಕೋಟ್ಯಾಂತರ ಯುವ ಜನತೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಯಾವ ಸರ್ಕಾರ ಬಂದರೂ ಯುವಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಸರ್ಕಾರ ನಿಲ್ಲಿಸಿರುವ ಪ್ರಶಸ್ತಿ ಪುರಸ್ಕಾರಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಮಾತನಾಡಿ, ಯುವಶಕ್ತಿ ದುಶ್ಚಟಗಳಿಂದ ದೂರ ಉಳಿದು ರಾಷ್ಟ್ರ ನಿರ್ಮಾಣದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಯುವ ಸಂಘಗಳು ನಶಿಸಿ ಹೋಗಲು ಯುವ ಸಬಲೀಕರಣ ಇಲಾಖೆಗಳ ನೀತಿಯೇ ಕಾರಣ ಇಂಥದನ್ನು ಇಲಾಖೆ ಸರಿಪಡಿಸಿಕೊಂಡು ಯುವ ಜನರನ್ನು ಪ್ರೋತ್ಸಾಹಿಸಬೇಕೆಂದು ಆಗ್ರಹಿಸಿದರು.
ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ. ಆರ್. ಕುಮಾರ್ ಮಾತನಾಡಿ ಯುವಜನರು ಶಿಸ್ತುನ್ನು ಕಾಪಾಡಿಕೊಂಡು ಹೋಗಬೇಕು, ಸಾಮಾಜಿಕ ಪ್ರಜ್ಞೆಯನ್ನು ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆಂಗಳೂರು ಮಹಾನಗರ ಪಾಲಿಕೆಗಳ ನೌಕರರ ಒಕ್ಕೂಟದ ಅಧ್ಯಕ್ಷ ಎ.ಅಮೃತ್ ರಾಜ್ ಮಾತನಾಡಿ,ಇತ್ತೀಚಿನ ದಿನಗಳಲ್ಲಿ ಯುವಜನರು ದಿಕ್ಕು ತಪ್ಪಿದ್ದಾರೆ ಅವರನ್ನು ನೈಜ ಮಾರ್ಗಕ್ಕೆ ಕರೆತರಲು ಒಕ್ಕೂಟ ಶ್ರಮ ವಹಿಸಬೇಕು ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧ್ಯಕ್ಷ ರವಿಕಾಂತ್ ಎನ್ ಸಿದ್ವೀರ್ ಹಾಗೂ ಇತರೆ ಎಲ್ಲ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷರು ಪದ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ 12 ಸಾಧಕರಾದ ಮಂಜುನಾಥ ಅದ್ದೆ,ಶತಬಿಷ್ ಶಿವಣ್ಣ ,ವಿದುಷಿ ಭಾಗ್ಯಶ್ರೀ ಚಂದ್ರಶೇಖರ್,ವೀಣಾ ಪೊನ್ನಪ್ಪ,ಓಜಸ್ವಿನಿ,ಸಿ.ಆರ್. ಮುರಡಯ್ಯ, ಎ.ಸಾಗರ್, ನಕ್ಷತ್ರ ಆರ್ ಗೋಳ, ಎ ಮಹೇಶ್, ಮನೋಹರ್ ನಾಯಕ್, ಮೊಹಮ್ಮದ್ ದಿಲ್ ಶಾದ್, ಹನುಮಂತು ಅವರಿಗೆ ಗ್ರೇಟರ್ ಬೆಂಗಳೂರು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ನಟರಾಜ್ ಕೆ ಬಾಬಾ, ಮುನಿಕೃಷ್ಣ ಪಿ.ಎಂ, ಕಾಂತಪ್ಪ ಯಡಮಡು,ಜೋಸೆಪ್ ಉಪಸ್ಥಿತರಿದ್ದರು.
ಅಭಿಷೇಕ ವಿ.ನಾಗರಾಜ್,ಅನಿಲ್ ಕುಮಾರ್ ಆರ್,ರಘುನಾಥ್ ಡಿ.ಎನ್., ಮಂಜುನಾಥ್ ದಂಡಿನಶಿವರ,ಪುನಿತ್ ಬಿ ಸಿ, ಅಭಿಲಾಷ್,ಗಂಗಣ್ಣ ಬಿ ಸಿ,ಲಕ್ಷಣ್ ನೆಲಸೊಗಡು,ವೀರಭದ್ರ ಸ್ವಾಮಿ ಪದಾಧಿಕಾರಿಗಳಾಗಿ ಪದ ಪ್ರದಾನ ಸ್ವೀಕರಿಸಿದರು.
ನಿರೂಪಣೆಯನ್ನು ಸಮನ್ವಯ ಸೋಮಶೇಖರ್ ನೆರವೇರಿಸಿದರು.
