ಮೈಸೂರು: ಮೈಸೂರು ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ ಕ್ವೀನ್ಸ್ ಸಂಸ್ಥೆ ವತಿಯಿಂದ ಗೋಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಸಾಕಲಾಗುತ್ತಿರುವ ಹಸುಗಳಿಗೆ 5,000 ಮೌಲ್ಯದ ಹಸಿ ಹುಲ್ಲನ್ನು ಒದಗಿಸಿ ಗೋಸೇವೆ ನೆರವೇರಿಸಲಾಯಿತು.
ಸೇವಾ ಕಾರ್ಯದ ಪ್ರಾಯೋಜಕರಾದ ಲಯನ್ ಹೆಚ್.ಎಸ್. ಮಹೇಶ್ವರಿ ರಾಜು ಅವರ ಇಬ್ಬರು ಪುತ್ರಿಯರಾದ ಸಪ್ತಮಿ ಪಟೇಲ್ ಹಾಗೂ ಸಮೀಕ್ಷಾ ಪಟೇಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಹುಟ್ಟುಹಬ್ಬದ ಸಂಭ್ರಮವನ್ನು ಸಮಾಜಮುಖಿ ಹಾಗೂ ಜೀವಸೇವೆಯ ಕಾರ್ಯದೊಂದಿಗೆ ಆಚರಿಸಿರುವುದು ಶ್ಲಾಘನೀಯವಾಗಿದೆ.
ಹುಟ್ಟುಹಬ್ಬದ ಸಂಭ್ರಮ-ಗೋಸೇವೆಯ ಮೂಲಕ ಸಾರ್ಥಕ ಎಂಬ ಸಂದೇಶದೊಂದಿಗೆ ಈ ಸೇವಾ ಕಾರ್ಯ ನೆರವೇರಿತು.
