ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದ ತಂಬಾಕು ಮಂಡಳಿಯಲ್ಲಿ ತಂಬಾಕು ಅಧಿಕಾರಿಗಳೊಂದಿಗೆ ಬೆಳೆಗಾರರು ಮತ್ತು ರೈತ ಸಂಘ,ಹಸಿರು ಸೇನೆಯವರು ಚರ್ಚೆ ನಡೆಸಿದರು.
ಮುಂದಿನ ದಿನದಲ್ಲಿ ಸರಾಸರಿ ಉತ್ತಮ ಬೆಲೆಯನ್ನು ಕೊಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಹಸಿರು ಸೇನೆ ಮತ್ತು ರೈತ ಸಂಘದ ಅಧ್ಯಕ್ಷರಾದ ಆರ್ ಮಂಜೇಗೌಡ, ರಾಜ್ಯ ಯುವ ಘಟಕದ ಅಧ್ಯಕ್ಷ ಕೆ ಆರ್ ಸ್ವಾಮಿ ಗೌಡ ಅವರುಗಳು ಮಾತನಾಡಿ, ಮುಂದಿನ ದಿನಗಳಲ್ಲಿ ತಂಬಾಕಿಗೆ ಉತ್ತಮ ಬೆಲೆ ಕೊಡಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಪ್ರಭು,ರಾಜ್ಯ ಸದಸ್ಯ ದೇವಶೆಟ್ಟಿ ನಾಗೇಂದ್ರ ತಾಲೂಕು ಸಂಚಾಲಕ ಕೊಣಸೂರ್ ಶಿವರಾಜು, ಹೋಬಳಿ ಅಧ್ಯಕ್ಷ ಯೋಗಣ್ಣ, ಯುವ ಘಟಕದ ಅಧ್ಯಕ್ಷ ಮಾದೇವ್, ನಾಗೇಂದ್ರ,, ದೇವರಾಜ್, ಬಿಲ್ಲಹಳ್ಳಿ ಸುರೇಶ್ ಮತ್ತಿತರರು ಹಾಜರಿದ್ದರು.
