ಮೈಸೂರು: ನೇತಾಜಿ ಸುಭಾಷ್ ಚಂದ್ರ ಬೋಸ್ ಯೂತ್ ಮೋಟಿವೇಷನ್ ಟೀಮ್ ಮೈಸೂರು ವತಿಯಿಂದ ಗಣೇಶ ಹಬ್ಬದ ಪ್ರಯುಕ್ತ ರಂಗೋಲಿ ಬಿಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರಂಗೋಲಿ ಬಿಡಿಸುವ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರನ್ನು ಪ್ರೋತ್ಸಾಹಿಸಿದ ಅಧ್ಯಕ್ಷರಾದ ನಿಖಿಲೇಶ್ ಹಾಗೂ ಆಗಮಿಸಿದ ಟೀಮ್ನ ಎಲ್ಲಾ ಸದಸ್ಯರು,
ನ್ಯಾಯಾಂಗ ಬಡಾವಣೆ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಎಲ್ಲಾ ನಿವಾಸಿಗಳಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಯೂತ್ ಮೋಟಿವೇಶನ್ ಟೀಮ್ ಮೈಸೂರು ಸ್ಥಾಪಕರಾದ ರಾಘವೇಂದ್ರ ಡಿ
ಧನ್ಯವಾದ ಸಲ್ಲಿಸಿದ್ದಾರೆ.
ಎಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದ್ದು
ಮುಂದಿನ ದಿನಗಳಲ್ಲೂ ಎಲ್ಲರ ಸಹಕಾರ,ಪ್ರೋತ್ಸಾಹ ಟೀಮ್ ಮೇಲೆ ಹೀಗೇ ಇರಲಿ ಎಂದು ಅವರು ಆಶಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಲತೇಶ್,
ಪಾಲಚಂದ್ರ,ರವೀಂದ್ರ,ಗುರು,
ರಾಘವೇಂದ್ರ ಡಿ,ತ್ಯಾಗರಾಜ್,
ಹರವು ಲೋಕೇಶ್,ಮುರಳಿ,ಪ್ರವೀಣ್,
ನಾಗೇಶ್,ಅಭಿಲಾಶ್,ಪಾರ್ವತಿ,ರಾಮಚಂದ್ರ,
ಮಂಜುಳಾ,ನಾಗೇಶ್,ಕಾವೇರಿ ಬಡಾವಣೆ ಹಾಗೂ ನ್ಯಾಯಾಂಗ ಬಡಾವಣೆ ನಿವಾಸಿಗಳು ಮತ್ತಿತರರು ಹಾಜರಿದ್ದರು.
