ಮೈಸೂರು: ಮೈಸೂರಿನ ಅರಿವು ಸಂಸ್ಥೆ ವತಿಯಿಂದ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ 84ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ
ನಾದಮಂಟಪದಲ್ಲಿ ಮೇ 31ರ ಬೆಳಿಗ್ಗೆ 10.30ಕ್ಕೆ ಗುರುವಂದನೆ ಯನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕೆಂದು ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಶ್ಯಪ್ ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರ್ ಎಸ್ ಎಸ್ ನಗರ ಪ್ರಚಾರಕರಾದ ನವೀನ್, ಸಮಾಜ ಸೇವಕರಾದ ರಘುರಾಮ್ ವಾಜಪಾಯಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷರಾದ ಕೆ.ಬಿ ಲಿಂಗರಾಜು, ಕ್ರೆಡಿಟ್ ಐ ಸಂಸ್ಥೆಯ ವರ್ಷ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ನಗರ ಪಾಲಿಕೆ ಮಾಜಿ ಸದಸ್ಯರಾದ ರಾಮಪ್ರಸಾದ್, ಕೆ ಎಮ್ ಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಸಮಾಜ ಸೇವಕರಾದ ದೂರ ರಾಜಣ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
