ಚಾಮರಾಜನಗರ: ಮನೆಯೊಂದರಲ್ಲಿ ದೊಡ್ಡ ಮಟ್ಟದ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಇಸ್ಪೀಟಿನ ಜೂಜಾಟ ಆಡುತ್ತಿದ್ದವರ ಮೇಲೆ
ಚಾಮರಾಜನಗರ ಗ್ರಾಮಾಂತರ ಪೊಲೀಸರು
ದಾಳಿ ಮಾಡಿ 13 ಮಂದಿಯನ್ನು ವಶಕ್ಕೆ ಪಡೆದು 5.30 ಲಕ್ಷ ರೂ ಜಪ್ತಿ ಮಾಡಿದ್ದಾರೆ.
ಸುದರ್ಶನಗೌಡ, ಮಹದೇವಮೂರ್ತಿ, ಮಹಮದ್ ಇಲಿಯಾಜ್, ರಾಜು,
ಮಹದೇವಸ್ವಾಮಿ, ಮಹೇಶ, ಭರತ್ ಭೂಷಣ್,ಕುಮಾರ, ಸಂಜಯ್, ನಾಗಣ್ಣ,ಶಿವಮೂರ್ತಿ, ರಾಜು, ಶಿವಲಿಂಗಪ್ಪ ಅವರನ್ನು ವಶಕ್ಕೆ ಪಡೆಯಲಾಗಿದೆ.
ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರಾದ ಶೇಷಾದ್ರಿ ಪಿ.ಎನ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಠಾಣಾ ವ್ಯಾಪ್ತಿಯ ನಂಜನಗೂಡು ರಸ್ತೆಯಲ್ಲಿರುವ ಶ್ರೀ ದೇವಿ ಗಾರ್ಡ್ನ್ ಮನೆಯೊಂದರಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟ ಆಡುತ್ತಿದ್ದವರ ಮೇಲೆ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದರು.
ಇಸ್ಪೀಟ್ ಆಟ ಆಡಲು ಪಣವಾಗಿ ಕಟ್ಟಿದ್ದ ಒಟ್ಟು 5,30,000 ರೂ 12 ವಿವಿಧ ಮಾದರಿಯ ಮೊಬೈಲ್ಗಳು, 5 ವಿವಿಧ ಮಾದರಿಯ ಮೊಟಾರ್ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಾಮರಾಜನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
