ಮೈಸೂರು: ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಮತ್ತು ದಿವಂಗತ ಹಾಲಪ್ಪನವರ ಸ್ಮರಣಾರ್ಥ ಜಿಲ್ಲೆಯ ಹುಣಸೂರು ತಾಲೂಕು, ಬಿಳಿಕೆರೆ ಹೋಬಳಿ, ಬೆಂಕಿಪುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಬಿಇಎಂಎಲ್ ಪ. ಜಾ / ಪ.ಪಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಮೈಸೂರು ವತಿಯಿಂದ ಪಂಚಾಯತ್ ಗ್ರಾಮಾಭಿವೃದ್ಧಿ ರೈತರ ಸೇವಾ ಸಂಸ್ಥೆ ಬೆಮೆಲ್ ಆರೋಗ್ಯ ಕೇಂದ್ರ, ಚಲ್ಲಹಳ್ಳಿ ಗ್ರಾಮ ಪಂಚಾಯಿತಿ, ನಾರಾಯಣ ಹೆಲ್ತ್ ಮೈಸೂರು ಮತ್ತು ವಾಸನ್ ಐ ಕೇರ್ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಿಇಎಂಎಲ್ ಪ. ಜಾ / ಪ.ಪಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಂ.ವಿ. ಮಾದೇವು ರವರು ಮಾಡಿದರು.
ಎಲ್ಲಾ ಗಣ್ಯರ ಸಮ್ಮುಖದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ನಮಿಸಲಾಯಿತು.
500ಕ್ಕೂ ಹೆಚ್ಚು ಸುತ್ತಮುತ್ತಲಿನ ಹಿರಿಯ ಗ್ರಾಮಸ್ಥರು ಬಂದು ತಾಪಸಣೆ ಮಾಡಿಸಿಕೊಂಡರು.
ಬೆಮೆಲ್ ಆರೋಗ್ಯ ಕೇಂದ್ರದ ವತಿಯಿಂದ ಉಚಿತ ಔಷಧಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಇಎಂಎಲ್ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಬಿಇಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷರಾದ ದಿವಾಕರ್,ಬೆಮೆಲ್ ಅಧಿಕಾರಿ ವರ್ಗದ ಉಪಾಧ್ಯಕ್ಷರಾದ ಮಾದೇಗೌಡರು, ವಾಸನ್ ಐ ಕೇರ್ ಕಾರ್ತಿಕ್, ನಾರಾಯಣ ಹಾಸ್ಪಿಟಲ್ ನ ಡಾ. ನವೀನ್, ಡಾ. ಹರ್ಷಿತ, ಚಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೆನ್ನಮ್ಮ, ಬೆಂಕಿಪುರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ರಾಜೇಶ್, ಪಂಚಾಯತ್ ಗ್ರಾಮ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷರಾದ ಯಾದವ್ ಹರೀಶ್, ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು ಮತ್ತಿತರರು ಭಾಗವಹಿಸಿದ್ದರು.
