ಮೈಸೂರು: ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ವತಿಯಿಂದ
ಜಾನುವಾರು ಕಟ್ಟಿದ ರೈತ ಬಾಂಧವರಿಗೆ ಮೈಸೂರು ಪೇಟ ಧರಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಪದಾಧಿಕಾರಿಗಳು ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ನೇತೃತ್ವದಲ್ಲಿ ಬನ್ನೂರಿನಲ್ಲಿ ನಡೆದ ಯಮದ್ರಮ್ಮ ಜಾತ್ರೆಯ ಪ್ರಯುಕ್ತ
ಜಾತ್ರೆಯಲ್ಲಿ ಭಾಗವಹಿಸಿದ ರಾಸುಗಳ ಮಾಲೀಕರಿಗೆ ಸಂಘಟನೆಯ ಪರವಾಗಿ ರಾಸು ಮಾಲೀಕರನ್ನು ಉತ್ತೇಜಿಸುವ ಉದ್ದೇಶದಿಂದ ಗೌರವಿಸಲಾಯಿತು.
ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು ಹೀಗೆ ವಿವಿಧ ಭಾಗಗಳಿಂದ ಬಂದಿದ್ದ ರೈತರುಗಳನ್ನು ಸಂಘಟನೆ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಬನ್ನೂರು ನಾರಾಯಣ್, ಬೆಟ್ಟಳ್ಳಿ ಶಿವರಾಮ್, ಪಾರ್ಥ, ಕೂರ್ಗಳ್ಳಿ ರೇವಣ್ಣ, ಚನ್ನಪಟ್ಟಣದ ಗುಂಡು ಬೀಡನಹಳ್ಳಿ ಕುಮಾರಣ್ಣ, ನಾಗೇಶ, ಹುನುಗ್ನಳ್ಳಿ ವಿಶ್ವನಾಥ್, ಸಾತನೂರು ಶಶಿ, ಮೈಸೂರಿನ ಎಡೆಹಳ್ಳಿ ಮತ್ತಿತರ ಅನೇಕ ರೈತ ಮುಖಂಡರು ಹಾಗೂ ರಾಜು ಮಾಲೀಕರು ಭಾಗವಹಿಸಿದ್ದರು.
