ಮೈಸೂರು: ಎರಡನೇ ಆಷಾಢ ಶುಕ್ರವಾರದ ಪ್ರಯುಕ್ತ ಮೈಸೂರಿನ ಅಗ್ರಹಾರ, ನವಗ್ರಹ ದೇವಸ್ಥಾನದ ಆವರಣದಲ್ಲಿರುವ ಶ್ರೀ ಪಾರ್ವತಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ತಾಯಿಗೆ ವಿಶೇಷ ಅಭಿಷೇಕ ನೆರವೇರಿಸಿ ಫಲ ತಾಂಬೂಲ ಇಟ್ಟು, ಬಗೆ ಬಗೆಯ ನೈವೇದ್ಯ ಮಾಡಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ತಾಯಿ ಪಾರ್ವತಿಗೆ ದೇವಸ್ಥಾನದ ಪ್ರದನ ಅರ್ಚಕರಾದ ಯೋಗಾನಂದ ಅವರು ಪೂಜೆ ಮಾಡಿದರು,ಅವರ ಪತ್ರ ಅಭಿನಂದನ್ ಅವರು ದೇವಿಗೆ ವಿಶಿಷ್ಟ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಿದರು.
ತಾಯಿಗೆ ಬೆಳ್ಳಿಯ ಕಿರೀಟ ಧರಿಸಿ ಆಭರಣಗಳನ್ನು ತೊಡಿಸಿ, ಬಗೆ ಬಗೆಯ ಹೂಗಳಿಂದ ಅಲಂಕರಿಸಲಾಗಿದ್ದು ನೋಡಲು ಎರಡು ಕಣ್ಣು ಸಾಲದೆಂಬಂತಿದೆ.ತಾಯಿ ಒಂದು ಕೈನಲ್ಲಿ ತ್ರಿಶೂಲ ಹಿಡಿದು ಮತ್ತೊಂದು ಕೈನಿಂದ ಆಶೀರ್ವಾದ ಮಾಡುತ್ತಿದ್ದಾಳೆ.
ಮಹಿಳೆಯರು ಈ ವೇಳೆ ನಿಂಬೆಹಣ್ಣಿನ ಆರತಿ ಮಾಡಿ ಭಕ್ತಿ ಸಮರ್ಪಿಸಿದರು.
