ಮೈಸೂರು: ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್ ಹಾಗೂ ಸಮಾಜ ಸೇವಕರಾದ ಗಗನ್ ಗೌಡ ಅವರು ಡಾ.ರಾಜಕುಮಾರ್ ಕಲಾ ಕೌಸ್ತುಭ ಪ್ರಶಸ್ತಿ 2026 ಕ್ಕೆ ಭಾಜನರಾಗಿದ್ದಾರೆ.
ಚಿಗುರು ಸಾಹಿತ್ಯ ಬಳಗ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ
ವರನಟ ಡಾ. ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಡಾ.ರಾಜಕುಮಾರ್ ಕಲಾ ಕೌಸ್ತುಭ ಪ್ರಶಸ್ತಿ 2026 ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೇ 4ರಂದು ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್ ಹಾಗೂ ಸಮಾಜ ಸೇವಕರಾದ ಪೊಲೀಸ್ ಲೇಔಟ್ ನಿವಾಸಿ ಗಗನ್ ಗೌಡ
ಅವರಿಗೆ ಸಮಾಜ ಸೇವಾ ಕ್ಷೇತ್ರದಿಂದ
ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷ ಎನ್ ಅನಂತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
