ಮೈಸೂರು: ಮಕ್ಕಳ ಕೈಗಳಿಗೆ ಮೊಬೈಲ್ ಕೊಡದೆ ಮೈದಾನದ ಕಡೆ ಕರೆತನ್ನಿ ಎಂದು
ಮೂಡ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್
ಕರೆ ನೀಡಿದರು.
ಜಯನಗರದ ಕನ್ನೇಗೌಡ ಕ್ರೀಡಾಂಗಣದಲ್ಲಿ ಸಂಗೊಳ್ಳಿರಾಯಣ್ಣ ಲೆಂಜೆಂಡ್ಸ್ ಕಪ್ 40ವರ್ಷ ಮೇಲ್ಪಟ್ಟ ಪುರುಷರ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಂಡಗಳಿಗೆ ಟ್ರೋಫಿ ನೀಡಿ ಗೌರವಿಸಿ ರಾಜೀವ್ ಮಾತನಾಡಿದರು.
ಮಕ್ಕಳಲ್ಲಿ ಕ್ರೀಡಾಮನೋಭಾವ ಮೂಡಿಸಲು ಪೋಷಕರ ಪಾತ್ರ ಮಹತ್ವವಾದುದು ಎಂದು ಹೇಳಿದ ಅವರು,ಕ್ರಿಕೆಟ್ ಕ್ರೀಡೆಯನ್ನ ಒಂದೆಡೆ ಯುವಕರು ಹೆಚ್ಚಾಗಿ ವೀಕ್ಷಣೆ ಮಾಡಿದರೆ ಕ್ರಿಕೇಟ್ ಆಟವನ್ನ ಸತತ ನಾಲ್ಕುದಶಕಗಳಿಂದ ಮೈಸೂರಿನ ಬಹುತೇಕ ಕ್ರೀಡಾಂಗಣದಲ್ಲಿ ಇವತ್ತಿಗೂ ಹೆಚ್ಚಾಗಿ ಆಡುವವರು 40ವರ್ಷಕ್ಕೂ ಹೆಚ್ಚಿನ ವಯಸ್ಕರು ಎನ್ನುವುದು ಸಂತಸದ ವಿಚಾರ ಎಂದು ಹೇಳಿದರು.
ಮೈಸೂರಿನಲ್ಲಿ ಸಾಂಸ್ಕೃತಿಕ ಕಲೆ ಸಾಹಿತ್ಯದ ಅಭಿರುಚಿಯೊಂದಿಗೆ ಕ್ರೀಡೆಗೂ ಸಹ ಹೆಚ್ಚಿನ ಪ್ರೋತ್ಸಾಹವಿದೆ, ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಮಹಿಳಾ ಆಟಗಾರರು ಸಹ ಸಾಧನೆಯನ್ನ ಮಾಡುತ್ತಿದ್ದಾರೆ, ಸಣ್ಣಪುಟ್ಟ ಮಕ್ಕಳ ಕೈಗಳಿಗೆ ಮೊಬೈಲ್ ಕೊಡದೆ ಉದ್ಯಾನ, ಮೈದಾನದ ಕಡೆ ಕರೆತರಲು ಪೋಷಕರು ಕಾಳಜಿವಹಿಸಬೇಕು ಎಂದು ರಾಜೀವ್ ತಿಳಿಹೇಳಿದರು.
ಪಂದ್ಯಾವಳಿಯಲ್ಲಿ ಕೆ.ಎಫ್.ಸಿಸಿ ತಂಡ ಪ್ರಥಮ ಬಹುಮಾನ ಮತ್ತು ಎಲವೆನ್ ಫ್ರೆಂಡ್ಸ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿವು.
ಹೆಚ್.ವಿ ರಾಜೀವ್ ರವರು ಎರಡೂ ತಂಡಗಳಿಗೆ ಟ್ರೋಫಿಯನ್ನ ನೀಡಿ ಗೌರವಿಸಿದರು,
ಈ ಸಂಧರ್ಭದಲ್ಲಿ ಮೂಡ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್, ಕಾಂಗ್ರೆಸ್ ಮುಖಂಡರಾದ ಎನ್.ಎಮ್ ನವೀನ್ ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಮಾ ವಿ.ರಾಂಪ್ರಸಾದ್, ಲೋಕೇಶ್ ಪಿಯಾ, ಚಿತ್ರನಿರ್ಮಾಪಕ ಮುಳ್ಳೂರು ಗುರುಪ್ರಸಾದ್, ಸಂಗೊಳ್ಳಿರಾಯಣ್ಣ ಬಳಗದ ಅಧ್ಯಕ್ಷ ರವಿತೇಜ, ಗುಂಡೂರಾವ್ ಅಭಿಮಾನಿ ಸಂಘದ ಅಧ್ಯಕ್ಷ ವಿನಯ್ ಕಣಗಾಲ್, ನಿರೂಪಕ ಅಜಯ್ ಶಾಸ್ತ್ರಿ, ಮುಖಂಡರಾದ ಪವನ್, ರಾಕೇಶ್, ಪ್ರವೀಣ್, ಹೇಮಂತ್, ಶರಣ್ ಮತ್ತಿತರರು ಹಾಜರಿದ್ದರು.
