ಮೈಸೂರು: ಬಿಹಾರಿ,ಕೊಲ್ಕತ್ತಾ ಟೈಲರು ಗಳಿಗೆ ಲೈಸೆನ್ಸ್ ನೀಡಬಾರದೆಂದು ಮೈಸೂರಿನ ಪಿ ಜಿ ಆರ್ ಎಸ್ ಎಸ್ ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ಹೂಟಗಳ್ಳಿ ಟೈಲರಿಂಗ್ ಮಾಲೀಕರ ಸಂಘ ಒತ್ತಾಯಿಸಿವೆ.
ವಲಸೆ ಬಂದಿರುವ ಬಿಹಾರಿ, ಕೊಲ್ಕತ್ತಾ ಟೈಲರು ಗಳಿಗೆ ಲೈಸೆನ್ಸ್ ನಿಷೇಧ ಮಾಡಬೇಕೆಂದು ಒತ್ತಾಯಿಸಿ ಹೂಟಗಳ್ಳಿ ನಗರ ಸಭೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸುಮಾರು ವರ್ಷಗಳಿಂದ ಹೂಟಗಳ್ಳಿ ಕೂರ್ಗಳ್ಳಿ ಬೆಳವಾಡಿ ಭಾಗದಲ್ಲಿ ಬಿಹಾರದಿಂದ ವಲಸೆ ಬಂದವರು ಸ್ಥಳೀಯವಾಗಿ ಟೈಲರಿಂಗ್ ಶಾಪ್ ಓಪನ್ ಮಾಡಿ ಹಿಂದಿ ಟೈಲರ್ ಗಳನ್ನು ಕೆಲಸಕ್ಕೆ ಇಟ್ಟುಕೊಂಡು,ತಮ್ಮಲ್ಲಿ ಬರುವ ಎಲ್ಲಾ ಗ್ರಾಹಕರನ್ನ ಅವರ ಫೋನ್ ನಂಬರನ್ನು ತೊಗೊಂಡು ಸ್ವತಹ ಟೈಲರಿಂಗ್ ಅಂಗಡಿಗಳನ್ನು ತೆರೆಯುತ್ತಿದ್ದಾರೆ.
ಜತೆಗೆ ನಮ್ಮ ಗ್ರಾಹಕರನ್ನು ಸೆಳೆದುಕೊಂಡು ಕೆಲಸ ಮಾಡುತ್ತಿದ್ದಾರೆ ಮತ್ತು ವಾಸ ಮಾಡಲಿಕ್ಕೆ ಇರುವ ಮನೆಗಳನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲೂ ಕೂಡ ಟೈಲರಿಂಗ್ ಕೆಲಸ ಮಾಡಲು ಶುರು ಮಾಡಿದ್ದಾರೆ. ಇದರಿಂದ ನಮ್ಮ ಸ್ಥಳೀಯ ಟೈಲರು ಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹೂಟಗಳ್ಳಿ ಟೈಲರಿಂಗ್ ಮಾಲೀಕರ ಸಂಘದವರು ಅಳಲು ತೋಡಿಕೊಂಡರು.
ಯಾರಿಗೆಲ್ಲ ಲೈಸೆನ್ಸ್ ಕೊಟ್ಟಿದ್ದಾರೊ ಅದನ್ನ ರದ್ದು ಮಾಡಬೇಕು, ಮನೆಗಳಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿರುವುದನ್ನು ಬಂದ್ ಮಾಡಿಸಬೇಕು,ಮುಂದೆ ಯಾರಿಗೂ ಲೈಸನ್ಸ್ ಕೊಡಬಾರದು, ವಲಸೆ ಬಂದಿರುವ ಟೈಲರ್ಗಳು ನಮ್ಮ ಅಂಗಡಿಗಳಲ್ಲೇ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಆದಷ್ಟು ಬೇಗ ಸ್ಥಳೀಯ ಟೈಲರ್ ಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿ ಹಿಂದಿ ಟೈಲರ್ ಗಳಿಗೆ ಅವಕಾಶ ಕೊಡದಂತೆ ಮಾಡಬೇಕೆಂದು ನಗರಸಭೆ ಆಯುಕ್ತರಿಗೆ ಮನವಿ ಪತ್ರ ಕೊಟ್ಟು ಕೋರಲಾಯಿತು.
ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಒಗ್ಗಟ್ಟಿನಿಂದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಕೊಡುವ ಸಂದರ್ಭದಲ್ಲಿ PGRSS ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿಯ ಅಧ್ಯಕ್ಷರಾದ ಯಾದವ್ ಹರೀಶ್, ಚಿರಜೀವ ಸೇವಾ ಟ್ರಸ್ಟ್ ಅಧ್ಯಕ್ಷರಾದ ರಕ್ತದಾನಿ ಮಂಜು, ಟೈಲರಿಂಗ್ ಮಾಲಿಕರಾದ ಮಂಜುಳಾ ಬೆಳವಾಡಿ, ಮಣಿ ಎಸ್, ಸ್ವಾಮಿ ಟೈಲರ್, ಮಣಿ, ಆಶಾ ರಾಣಿ, ಶಿಲ್ಪ, ಪಲ್ಲವಿ, ಸುನಂದ ಹಾಗೂ ಹಲವಾರು ಮಾಲೀಕರು ಹಾಜರಿದ್ದರು.
