ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪ ಭವನಹಳ್ಳಿ ಪ್ರೌಢ ಶಾಲೆಗೆ ಬ್ಲೂ ಇಂಡಿಯಾ ಪಾರ್ಟಿ ರಾಜ್ಯ ಅಧ್ಯಕ್ಷರಾದ ಚಂದ್ರಶೇಖರ್ ದೊಡ್ಡಣ್ಣ ಮೌರ್ಯ ಅವರು ಪ್ರಿಂಟಿಂಗ್ ಮಿಷನ್ ಕೊಡುಗೆ ನೀಡಿದರು.
ಪ್ರಿಂಟಿಂಗ್ ಮಿಷನ್ ಕೊಡುಗೆ ನೀಡಿದ್ದಕ್ಕೆ ಚಂದ್ರಶೇಖರ್ ದೊಡ್ಡಣ್ಣ ಮೌರ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ರೀತಿ ಸಣ್ಣ ಸಣ್ಣ ಶಾಲೆ ಗಳಿಗೆ ನಿಮ್ಮಂತವರ ಸಹಾಯ ಉತ್ತಮ ಬೆಳವಣಿಗೆಯಾಗಿದೆ ಇದೇ ರೀತಿ ಮುಂದುವರಿಸಿಕೊಂಡು ಹೋಗಿ ಎಂದು ಹಾರೈಸಿದರು.
ಶಿಕ್ಷಕರಾದ ನರಸಿಂಹಮೂರ್ತಿ,ತಿಪ್ಪೇಸ್ವಾಮಿ, ಅನುಸೂಯ, ಶಿವಶಂಕರ್, ಮಾಕೋಡು ಬಸವರಾಜ್,ಕೊಣಸೂರು ಶಿವರಾಜ್, ಸೋಮೇ ಗೌಡರು, ಬೋರಪ್ಪ ಶೆಟ್ಟಿ ಮತ್ತಿತರರು ಹಾಜರಿದ್ದರು.
