ಮೈಸೂರು: ಈ ಬಾರಿಯ ದಸರಾ ಚಲನಚಿತ್ರೋತ್ಸವ ರದ್ದು ಮಾಡಿರುವುದು ಸರಿಯಲ್ಲ ಎಂದು ಸಂಸದ ಯದುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಸರಾ ಚಲನಚಿತ್ರೋತ್ಸವ ರದ್ದು ಮಾಡಿರುವುದರಿಂದ
ಚಿತ್ರಪ್ರೇಮಿಗಳಿಗೆ ನಿರಾಸೆಯಾಗಿದೆ.
ದಸರಾದ ಅವಿಭಾಜ್ಯ ಸಾಂಸ್ಕೃತಿಕ ಅಂಗವಾಗಿದ್ದ ಚಲನಚಿತ್ರೋತ್ಸವ
ಏಕಾಏಕಿ ರದ್ದು ಮಾಡುವ ಮೂಲಕ ಸರ್ಕಾರ
ಸ್ಥಳೀಯ ಕಲಾವಿದರು ಮತ್ತು ಚಲನಚಿತ್ರ ಪ್ರೇಮಿಗಳಿಗೆ ಅಪಚಾರ ಎಸಗಿದೆ ಎಂದು ಯದುವೀರ್ ಟ್ವೀಟ್ ಮಾಡಿ ಆರೋಪಿಸಿದ್ದಾರೆ.
ಹಲವು ವರ್ಷಗಳಿಂದ ಚಲನಚಿತ್ರೋತ್ಸವ ದಸರಾದ ಅವಿಭಾಜ್ಯ ಕಾರ್ಯಕ್ರಮವಾಗಿತ್ತು.
ಯುವ ನಿರ್ದೇಶಕರಿಗೆ ವೇದಿಕೆ ಒದಗಿಸಿತ್ತು.
ಅರ್ಥಪೂರ್ಣ ಸಿನಿಮಾಗಳಿಗೆ ಸಾಕ್ಷಿಯಾಗಿತ್ತು,
ಚಿತ್ರರಂಗದ ಹಿರಿಯರನ್ನ ಸಂಪರ್ಕಿಸದೆ
ಏಕಾಏಕಿ ರದ್ದುಗೊಳಿಸಿರುವುದು ಖಂಡನೀಯ ಎಂದು ಯದುವೀರ್ ತಿಳಿಸಿದ್ದಾರೆ.
ಚಿತ್ರಪರಂಪರೆ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಉದಾಸೀನತೆ ಎಂದು ಯದುವೀರ್ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
