ಮೈಸೂರು: ನಗರಾಭಿವೃದ್ಧಿ ಸಚಿವರ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡ ಕೆ ಆರ್ ರಕ್ಷಿತ್ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್, ಕೆ ಆರ್ ರಕ್ಷಿತ್ ಅವರು ಮೈಸೂರು ಅಭಿವೃಧಿ ಪ್ರಾಧಿಕಾರ ರಚನೆಗೊಂಡ ನಂತರ ನೇಮಕವಾಗಿ ಉತ್ತಮ ಕಾರ್ಯದೊಂದಿಗೆ ಯಶಸ್ವಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಈಗ ನಗರಾಭಿವೃದ್ಧಿ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಯಾಗಿರುವುದು ಸಂತಸ ತಂದಿದೆ ಅವರಿಗೆ ಶುಭವಾಗಲಿ ಎಂದು ಹಾರಿಸಿದರು.
ಈ ವೇಳೆ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಹಿರಿಯ ಮುಖಂಡರಾದ ರಾಮಚಂದ್ರಣ್ಣ, ಜೈಪ್ರಕಾಶ್ ,ಜೈ ಕುಮಾರ್, ರಾಮ ,ಪರಮೇಶ್ ಮತ್ತಿತರರು ಹಾಜರಿದ್ದರು
