ಮೈಸೂರು: ಹಣ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾರೆಂಬ ಕೋಟೆಹುಂಡಿ ಮಹದೇವು ಅವರ ಆರೋಪಕ್ಕೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಪ್ರಕರಣದ ಹಿಂದೆ ಸಿದ್ದರಾಮಯ್ಯ ಅವರ ಮಗನ ಕುಮ್ಮಕ್ಕು ಇದೆ. ಕೋಟೆಹುಂಡಿ ಮಹದೇವುಗೆ 55 ಲಕ್ಷ ರೂ. ಎಲ್ಲಿಂದ ಬಂತು ಎಂದು ಖಾರವಾಗಿ ಪ್ರಶ್ನಿಸಿದರು.
ನಾನು ಯಾವತ್ತೂ ಹಣದ ವ್ಯವಹಾರ ಮಾಡಿದವನಲ್ಲ. ನನ್ನ ತೇಜೋವಧೆ ಮಾಡಲು ಸಿಎಂ ಅವರ ಚೇಲಾಗಳು ಸಂಚು ರೂಪಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪೊಲೀಸರು ಈಗಾಗಲೇ ನೋಟಿಸ್ ನೀಡಿದ್ದಾರೆ. ನಾನು ಉತ್ತರ ನೀಡಿದ್ದೇನೆ. ರೈಲ್ವೆ ನಿಲ್ದಾಣಕ್ಕೆ ಬಂದು ನನ್ನ ಹೇಳಿಕೆ ಕೂಡ ಪಡೆದಿದ್ದಾರೆ. ಈ ರೀತಿ ನನ್ನ ತೇಜೋವಧೆ ಮಾಡುವುದು ಸರಿಯಲ್ಲ ಎಂದು ವಿಶ್ವನಾಥ್ ಹೇಳಿದರು.
