
ಹುಣಸೂರು: ಹುಣಸೂರಿನಲ್ಲಿ ವಿಶ್ವ ಮಹಿಳಾ ಇಂದಿರಾ ಗಾಂಧಿ ಒಕ್ಕೂಟದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರಾದ ಕಮಲಾ ಆನಂದ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮೊದಲಿಗೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪೂಜೆ ಮಾಡಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಈ ವೇಳೆ ಹುಣಸೂರಿನ ಎರಡು ಅಂಗನವಾಡಿ ಶಾಲಾ ಮಕ್ಕಳಿಗೆ ಕಮಲಾ ಆನಂದ್ ಅವರು ಬಟ್ಟೆ ವಿತರಣೆ ಮಾಡಿದರು.
ನಂತರ ಅಂಗನವಾಡಿ ಮಕ್ಕಳಿಗೆ ಸಿಹಿ ವಿತರಿಸಿ ಶುಭಾ ಹಾರೈಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಮಹಿಳಾ ಇಂದಿರಾ ಗಾಂಧಿ ಒಕ್ಕೂಟಕ್ಕೆ ಸದಸ್ಯರಾಗಿ ಸೇರ್ಪಡೆಗೊಂಡ ಅಂಗನವಾಡಿ ಶಿಕ್ಷಕಿ ಚಿನ್ನಮ್ಮ ಅವರನ್ನು ಕಮಲಾ ಆನಂದ್ ಅವರು ಶಾಲು ಹೊದಿಸಿ ಹಾರ ಹಾಕಿ ಸಾಂಪ್ರದಾಯಿಕವಾಗಿ ಸನ್ಮಾನಿಸಿ ಗೌರವಿಸಿದರು.

