ಮೈಸೂರು: ಮೈಸೂರು ನಗರದ ವಿಜಯನಗರ ಮೂಡ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೈಸೂರು ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆ ವತಿಯಿಂದ ಸ್ವಚ್ಛತೆ ಮತ್ತು ಪರಿಸರ ಜಾಗೃತಿ ಅಭಿಯಾನ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಕ್ರೀಡಾಂಗಣದ ಸುತ್ತಮುತ್ತ ಬಿದ್ದಿದ್ದ ಪ್ಲಾಸ್ಟಿಕ್, ಕಸ ಹಾಗೂ ತ್ಯಾಜ್ಯಗಳನ್ನು ಸಂಗ್ರಹಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು.
ಸಾರ್ವಜನಿಕರು ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬಾಸಿಡರಸ್ ಸಂಸ್ಥೆಯ ಅಧ್ಯಕ್ಷರಾದ ಎಚ್ .ಕೆ ಪ್ರಸನ್ನ ಸ್ವಚ್ಛ ಪರಿಸರವೇ ಉತ್ತಮ ಆರೋಗ್ಯದ ಮೂಲ. ಪ್ರತಿಯೊಬ್ಬ ನಾಗರಿಕರು ತಮ್ಮ ಮನೆ, ರಸ್ತೆ, ಉದ್ಯಾನ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿಯನ್ನು ಅರಿತು ನಡೆದುಕೊಂಡರೆ ನಗರ ಇನ್ನಷ್ಟು ಸುಂದರವಾಗಲಿದೆ ಎಂದು ತಿಳಿಸಿದರು.
ಈ ಸೇವಾ ಕಾರ್ಯದಲ್ಲಿ ಲಯನ್ಸ್ ಜಿಲ್ಲಾ ಅಧ್ಯಕ್ಷ( ಅರಣ್ಯ) ಲಯನ್ ಹೆಚ್.ಸಿ.ಕಾಂತಾರಾಜು,ಕಾರ್ಯದರ್ಶಿ ಡಾ. ಜಿ ಕಿಶೋರ್ ಖಜಾಂಚಿ ಪಿ ಮಲ್ಲಿಕಾರ್ಜುನಪ್ಪ ,ಕೆ.ಆರ್ ಭಾಸ್ಕರಾನಂದ, ಟಿ ವೆಂಕಟೇಶ್, ಕೆ.ಟಿ ವಿಷ್ಣು, ಯಶೋಧಮ್ಮ, ಅಮರ ಭವಾನಿ ರಾಮಚಂದ್ರ ,ರವಿ ಮತ್ತಿತರರು ಸಕ್ರಿಯವಾಗಿ ಪಾಲ್ಗೊಂಡು ಸಮಾಜ ಸೇವೆಯ ನಿಜವಾದ ಮೌಲ್ಯವನ್ನು ಪ್ರದರ್ಶಿಸಿದರು ಎಂದು ಲಯನ್ಸ್ ಜಿಲ್ಲೆ, 317 ಜಿ ಯ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲಯನ್ ಸಿ.ಆರ್.ದಿನೇಶ್ ಅವರು ತಿಳಿಸಿದ್ದಾರೆ.
