ಮೈಸೂರು: ಮೇ 2: ಐತಿಹಾಸಿಕ ದಿನ,ಸರ್ಕಾರ ಪೌರಕಾರ್ಮಿಕರನ್ನು ಏಕಕಾಲದಲ್ಲಿ ಖಾಯಂ ನೇಮಕಾತಿ ಮಾಡುವ ಮೂಲಕ ಅವರ ಉಜ್ವಲ ಭವಿಷ್ಯವನ್ನು ಬರೆದಾಗ ದಿನ,ಅದಕ್ಕಾಗಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಹೇಳಿದರು.
ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ನೇತೃತ್ವದಲ್ಲಿ ಗೃಹ ಕಚೇರಿ ಜನನಿಯಲ್ಲಿ ವಿವಿದೆಡೆ ಹಲವಾರು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಗುರುತಿಸಿ ಅಭಿನಂದಿಸಿದ ವೇಳೆ ಅವರು ಮಾತನಾಡಿದರು.
ಕಾರ್ಮಿಕರನ್ನ ಗೌರವಿಸಬೇಕು, ಅವರು ಶ್ರಮಜೀವಿಗಳು,ರಾಷ್ಟ್ರ ಅಭಿವೃದ್ಧಿ ಆಗಬೇಕಾದರೆ ಅವರ ಕೊಡುಗೆ ಅಪಾರವಾಗಿದೆ.ಅವರನ್ನು ದುಡಿಸಿಕೊಂಡು ಅವರ ಸೇವೆಯನ್ನು ನಿರ್ಲಕ್ಷ ಮಾಡಬಾರದು ಎಂದು ತಿಳಿಸಿದರು.
ಕಾರ್ಮಿಕರು ಬಹಳ ಒತ್ತಡದಿಂದ ಕೆಲಸ ನಿರ್ವಹಣೆ ಮಾಡುತ್ತಾರೆ,ಅವರ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ಕೊಡುವ ವಾತಾವರಣ ನಿರ್ಮಾಣವಾಗಬೇಕು.
ಅವರಿಗೆ ಎಲ್ಲಿವರೆಗೆ ಶಕ್ತಿ ಇರುತ್ತದೆ ಅಲ್ಲಿವರೆಗೆ ಮಾತ್ರ ಅವರ ದುಡಿಮೆಗೆ ಬೆಲೆ ಇರುತ್ತದೆ.ಅವರಿಗೆ ದುಡಿಯಲು ಶಕ್ತಿ ಇಲ್ಲದಿದ್ದಾಗ ಆರ್ಥಿಕವಾಗಿ ಅತ್ಯಂತ ದುರ್ಬಲರಾಗಿಬಿಡುತ್ತಾರೆ.ಇದನ್ನು ಸಮಾಜ ಮತ್ತು ಸರ್ಕಾರ ಮನಗಾಣಬೇಕು, ಅವರಿಗೂ ಕೂಡ ವಿಶ್ರಾಂತ ಜೀವನವನ್ನು ನೆಮ್ಮದಿಯಿಂದ ಕಳೆಯಲು ವಾತಾವರಣ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜೊಮ್ಯಾಟೋ ಮಹದೇವಸ್ವಾಮಿ, ಭದ್ರತಾ ಸಿಬ್ಬಂದಿ ನಾಗರಾಜು ,ಆಟೋ ವೆಂಕಟೇಶ್ ,ಜಾಕಿ ಗಾರ್ಮೆಂಟ್ಸ್ನ ಲಕ್ಷ್ಮಿ ,ಪೌರಕಾರ್ಮಿಕರಾದ ಚೆನ್ನಮ್ಮ,ಕೆ ಎಸ್ ಐ ಸಿ ಯ ಎನ್. ಸಿ ಚೈತ್ರ ,ವಸಂತ ರವರುಗಳನ್ನು ಗೌರವಿಸಲಾಯಿತು.
ಕರ್ನಾಟಕ ಸರ್ಕಾರ ಕಾರ್ಮಿಕರ ಪರವಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ.ಆದರೆ ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ.ಅವರ ಯೋಗ ಕ್ಷೇಮಕ್ಕೆ ಯಾವುದೇ ಒಂದು ಕಾನೂನನ್ನ ನಿರೂಪಿಸುವುದರಲ್ಲಿ ವಿಫಲವಾಗಿದೆ. ಇದೊಂದು ದುರ್ದೈವದ ಸಂಗತಿ ಎಂದು ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಕೆಪಿಸಿಸಿ ವಕ್ತಾರರಾದ ಹೆಚ್.ಎ.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಸೋಮಶೇಖರ್, ಶ್ರೀಧರ್, ಮುಖಂಡರಾದ ರವಿಶಂಕರ್, ವಿಜಯ್ ಕುಮಾರ್, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹ್ಮದ್ ಫಾರೂಖ್, ಮಹೇಂದ್ರ, ಸಂತೋಷ್, ಅಭಿಷೇಕ್, ರಾಮನ್,ನಾಗ ಮಹದೇವ ಮತ್ತಿತರರು ಉಪಸ್ಥಿತರಿದ್ದರು.
