ಮೈಸೂರು: ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು 8.6 ಲಕ್ಷ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತು, 5 ಕೆಜಿ ಗಾಂಜಾ ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಅಮ್ಜದ್ ಷಾಷ, ಜಿಯಾ ಖಾನ್, ಮಹಮ್ಮದ್ ಸಕ್ಲೈನ್ ಮತ್ತು ಸೈಯದ್ ಬೇಗ್
ಬಂಧಿತ ಆರೋಪಿಗಳು.
ಈ ಆರೋಪಿಗಳು ಅನುಮಾನಾಸ್ಪದವಾಗಿ ಪ್ರಯಾಣಿಸುತ್ತಿದ್ದ ಸ್ವಿಫ್ಟ್ ಕಾರನ್ನು ಸಿಸಿಬಿ ಪೊಲೀಸರು ತಪಾಸಣೆಗೆ ಒಳಪಡಿಸಿದಾಗ ಡ್ರಗ್ಸ್ ಇದ್ದುದು ಪತ್ತೆಯಾಗಿದೆ.
ಕಾರ್ಯಾಚರಣೆಯಯಲ್ಲಿ ಸಿಸಿಬಿ ಎಸಿಪಿ ಮಹಮ್ಮದ್ ಶರೀಫ್ ರಾವುತರ್, ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್, ಪಿಎಸ್ಐಗಳಾದ ಲೇಪಾಕ್ಷ, ಜೋತ್ಸ್ನಾರಾಜ್, ರೇವಣ ಸಿದ್ದಪ್ಪ, ಅನಿಲ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
