ಮೈಸೂರು: ಮೈಸೂರಿನಲ್ಲಿ ಆರ್ ಟಿ ಐ ಕಾರ್ಯಕರ್ತರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬ್ಲ್ಯಾಕ್ ಮೇಲ್ ಆರ್ ಟಿ ಐ ಕಾರ್ಯಕರ್ತರನ್ನು ಗಡಿಪಾರು ಮಾಡ ಬೇಕೆಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಅವ್ಯವಹಾರ ಮತ್ತು ಭ್ರಷ್ಟಾಚಾರಗಳನ್ನು ಮಾಹಿತಿ ಹಕ್ಕು ಕಾಯಿದೆ ಪ್ರಕಾರ ದಾಖಲೆಗಳನ್ನು ಪಡೆದು ಹಾದಿ ಬೀದಿಯಲ್ಲಿ ಯೂಟ್ಯೂಬ್ ಮಾಧ್ಯಮಗಳಲ್ಲಿ ನಿಂತು ಮಾತನಾಡುತ್ತಿದ್ದಾರೆ.
ಮಾಧ್ಯಮಗಳಲ್ಲಿ ಮಾತನಾಡುವುದು ತಪ್ಪಲ್ಲ, ಆದರೆ ಆರೋಪಿಗಳ ಮೇಲೆ ದಾಖಲೆಗಳು ಇದ್ದರು ಕೂಡ ಅನೇಕ ಪ್ರಕರಣಗಳಲ್ಲಿ ದೂರು ದಾಖಲಿಸದೆ ಬರಿ ಪ್ರಚಾರಕ್ಕೆ ಮಾತ್ರ ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳೇ ಆರ್ ಟಿ ಐ ಕಾರ್ಯಕರ್ತರಿಗೆ ರಾಜಾತೀತ್ಯ ನೀಡುತ್ತಿರುವುದು ಮತ್ತು ಕೆಲವು ದಾಖಲೆಗಳ ಮಾಹಿತಿಗಳನ್ನು ಅವರುಗಳೇ ನೀಡುತ್ತಿದ್ದಾರೆ ಎಂದು ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದ್ದಾರೆ ಅವರು
ಆರ್ ಟಿ ಐ ಕಾರ್ಯಕರ್ತರೊಬ್ಬರು ವ್ಯಕ್ತಿಯ ಮೇಲೆ ಕಾರು ಹತ್ತಿಸಿದ ಘಟನೆ ನೋಡಿ ಆತಂಕ ಉಂಟಾಗಿದೆ ಆರ್ ಟಿ ಐ ಕಾರ್ಯಕರ್ತರು ಮಾಹಿತಿ ಹಕ್ಕು ಕಾಯಿದೆ ಅನ್ನು ಭ್ರಷ್ಟಾಚಾರ ನಿರ್ಮೂಲನೆಗಾಗಿ ಟೊಂಕ ಕಟ್ಟಿ ಹೋರಾಟ ಮಾಡಬೇಕೆ ಹೊರತು ದಾಖಲೆ ಪಡೆದು ಬೆದರಿಸ ಬಾರದು ಎಂದು ತಿಳಿಸಿದ್ದಾರೆ.
ಪೋಲಿಸ್ ಇಲಾಖೆ ಆರ್,ಟಿ,ಐ, ಕಾರ್ಯಕರ್ತರ ಚಲನವಲನ ಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ತಂಡ ರೂಪಿಸಬೇಕು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಸಂಪರ್ಕ ಕಂಡು ಬಂದಲ್ಲಿ ತನಿಖೆ ನಡೆಸುವಂತೆ ತೇಜಸ್ವಿ ಮನವಿ ಮಾಡಿದ್ದಾರೆ.
ಮಾಹಿತಿ ಹಕ್ಕು ಕಾಯಿದೆ ದುರುಪಯೋಗ ಮಾಡಿಕೊಂಡು ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡುವುದು ಕಂಡು ಬಂದಲ್ಲಿ
ಅಂತಹವರನ್ನು ಗಡಿಪಾರು ಮಾಡಿ ಕ್ರಮ ಕೈಗೊಳ್ಳಬೇಕು ಹಾಗೂ ಯಾವುದೇ ಸರ್ಕಾರಿ ಅಧಿಕಾರಿಗಳು ಇವರ ನಡುವೆ ಶಾಮೀಲಾಗಿದ್ದಲ್ಲಿ ಅಂತಹ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತೇಜಸ್ವಿ ನಾಗಲಿಂಗಸ್ವಾಮಿ ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
