ಯಾದಗಿರಿ: ಚಲಿಸುತ್ತಿದ್ದ ಬೈಕ್ ಆಕಸ್ಮಿಕವಾಗಿ ಸ್ಕೀಡ್ ಆಗಿ ಬಸವಸಾಗರ ಎಡದಂಡೆ ಕಾಲುವೆಗೆ ಉರುಳಿದ ಪರಿಣಾಮ ಹಿಂಬದಿ ಕುಳಿತಿದ್ದ ಪತ್ನಿ ಮೃತಪಟ್ಟು,ಪತಿ ಪ್ರಾಣಾಪಾಯದಿಂದ ಪಾರಾದ ಘಟನೆ ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕಿನ ಕೆಂಭಾವಿ ಬಳಿ ನಡೆದಿದೆ.
ಪತ್ತೆಪೂರ ಗ್ರಾಮದ
ರೇಣುಕಾ(೨೨) ಮೃತಪಟ್ಟ ಪತ್ನಿ.
ವಿಜಯಪುರ ಜಿಲ್ಲೆಯ ಬಂಡೆಪ್ಪನಳ್ಳಿ ಜಾತ್ರೆ ಮುಗಿಸಿಕೊಂಡು ತಮ್ಮ ಸ್ವಗ್ರಾಮ ಪತ್ತೆಪೂರಕ್ಕೆ ತೆರಳುತ್ತಿದ್ದಾಗ ನೀರು ತುಂಬಿದ ಬಸವಸಾಗರ ಎಡದಂಡೆ ಕಾಲುವೆಗೆ ಬೈಕ್ ಸಮೇತ ದಂಪತಿಗಳು ಬಿದ್ದಿದ್ದಾರೆ.
ರೇಣುಕಾ(೨೨) ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಪತಿ ನೀರಿನ ರಭಸದಲ್ಲೂ ಈಜಿ ದಡ ಸೇರಿದ್ದಾರೆ,ಆದರೆ ಪತ್ನಿಯನ್ನು ಉಳಿಸಲು ವಿಫಲನಾಗಿದ್ದಾರೆ.
ಈ ಕುರಿತು ಕೆಂಭಾವಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
