ಬನ್ನೂರು: ಕರ್ನಾಟಕ ಸರ್ಕಾರ ರಾಜಕೀಯ ಸಂಬಂಧವನ್ನು ಉಳಿಸಿಕೊಳ್ಳಲು ಕಾವೇರಿಕೊಳ್ಳದ ರೈತರನ್ನು ಬಲಿಕೊಟ್ಟು ತಮಿಳುನಾಡಿಗೆ ಸತತವಾಗಿ ನೀರು ಹರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬನ್ನೂರಿನ ಅತಿಥಿ ಗೃಹದಲ್ಲಿ
ಸುದ್ದಿಗೋಷ್ಠಿ ಕರೆದು ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ ಅವರು,
ಭತ್ತ ಬೆಳೆಯಬೇಕಾದ ಸ್ಥಳದಲ್ಲಿ ರಾಗಿ ಜೋಳ ಉದ್ದು ಬೆಳೆಯಿರಿ ಎಂದು ಮುಖ್ಯ ಮಂತ್ರಿಗಳು ಹೇಳುತ್ತಾರೆ, ಕಟ್ಟು ನೀರು ಪದ್ದತಿಯಲ್ಲಿ ನೀರು ಬಿಡುತ್ತೇವೆ ಎಂದು ರೈತರನ್ನು ಹೆದುರಿಸುತ್ತಿದ್ದಾರೆ ಅವೈಜ್ಞಾನಿಕವಾಗಿ ಬೆಳೆ ಬೆಳೆಯಲು ಸರ್ಕಾರ ಒತ್ತಡ ಹೇರುತ್ತಿದೆ ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ಕೊಳ್ಳದ ರೈತರನ್ನು ಜಾನುವಾರುಗಳನ್ನು ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಈಗ ಇರುವ 15 ದಿನ ನೀರು ಬಿಟ್ಟು ನಿಲ್ಲಿಸುವುದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಕಬ್ಬು ಕಟವಾಗದೆ ಮೈಸೂರು ಪ್ರಾಂತ್ಯದ ಅನೇಕ ರೈತರು ಸಂಕಷ್ಟದಲ್ಲಿದ್ದಾರೆ ಇದನ್ನು ಹೋಗಲಾಡಿಸಿ ಜಿಲ್ಲಾಡಳಿತ ಕೂಡಲೇ ಕಬ್ಬು ಕಟಾವಿಗೆ ಸಂಬಂಧಪಟ್ಟ ಕಾರ್ಖಾನೆಗಳಿಗೆ ರೈತರ ಕಬ್ಬು ಕಟಾವು ಮಾಡುವಂತೆ ಆದೇಶ ಬೇಕೆಂದು ಒತ್ತಾಯಿಸಿದರು.
ಸಕ್ಕರೆ ಬೆಲೆ ಏರಿಕೆ ಆಗಿರುವುದರಿಂದ ಸಕ್ಕರೆಯಿಂದ ಬರುವ ಲಾಭವನ್ನು ರೈತರಿಗೆ ಹಂಚಬೇಕೆಂದು ಮತ್ತು ಪ್ರತಿ ಟನ್ ಕಬ್ಬಿಗೆ 5000 ನೀಡಬೇಕೆಂದು ಆಗ್ರಹಿಸಿದರು.
ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಸುತ್ತೋಲೆಗಳನ್ನು ಹೊರಡಿಸಿ ರಾಜ್ಯದ ರೈತರನ್ನು ಕಬ್ಬು ಬೆಳೆಗಾರರನ್ನು ರಕ್ಷುಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ರೈತ ಮುಖಂಡರಾದ ಹೊನ್ನೇಗೌಡ್ರು, ಶಿವರಾಮು, ವಿಶ್ವನಾಥ್, ಜಯರಾಮು, ಪ್ರಕಾಶ್, ಗಣೇಶ್, ಎಳವನ ಹುಂಡಿ ನಿಂಗೇಗೌಡ, ಕಾಳೇಗೌಡ, ಕೇತುಪುರ ನಾಗರಾಜ್, ರವೀಂದ್ರ,ಮಲೆಯೂರು ರಾಜಣ್ಣ
ಮತ್ತಿತರ ಮುಖಂಡರು ಭಾಗವಹಿಸಿದ್ದರು.
