ಮೈಸೂರು: ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ ವರ್ಗಕ್ಕೆ ಸೀರೆ ಬಳೆ ಅರಿಶಿನ ಕುಂಕುಮ ಸಹಿತ ಬಾಗಿನ ಸಮರ್ಪಣೆ ಮಾಡಲಾಯಿತು.
ಶ್ರೀದುರ್ಗಾ ಫೌಂಡೇಶನ್ ಹಾಗೂ ಪಿ ಆರ್ ಕೆ ಫೌಂಡೇಶನ್ ವತಿಯಿಂದ ಆಷಾಡ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿ ವರ್ಗಕ್ಕೆ ಸೀರೆ ಬಳೆ ಅರಿಶಿನ ಕುಂಕುಮ ಬಾಗಿನ ಸಮರ್ಪಣೆ ಮಾಡಲಾಯಿತು,
ಈ ಸಂಧರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರು ಮಾತನಾಡಿ,ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ ಇಂತಹ ಸಂದರ್ಭದಲ್ಲಿ ಶಕ್ತಿ ದೇವತೆ ದರ್ಶನ ಪಡೆದರೆ ಒಳಿತಾಗುತ್ತದೆ ಎಂದು ಹೇಳಿದರು.
ಅದರಲ್ಲೂ ಜ್ಞಾನ ಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಇರುವ ಚಾಮುಂಡಿತಾಯಿಗೆ ಆಷಾಢ ಮಾಸದಲ್ಲಿ ಪೂಜೆ ಸಲ್ಲಿಸಿದರೆ ಒಳ್ಳೆಯಾದಗುತ್ತದೆ ಎಂದು ಹೇಳಿದರು.
ಪುರಾಣಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಆಷಾಡ ಮಾಸದಲ್ಲಿ ಚಾಮುಂಡಿ ದೇವಿಗೆ ವಿಶೇಷ ಪ್ರಾರ್ಥನೆ ಪೂಜಾ ಕೈಂಕರ್ಯ ಸೇವೆ ಸಲ್ಲಿಸಲು ಮಹಿಳೆಯರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ, ಪ್ರತಿನಿತ್ಯ ಸೇವೆ ಸಲ್ಲಿಸುವ ಮಹಿಳಾ ಭದ್ರತಾ, ಸ್ವಚ್ಛತಾ ಸಿಬ್ಬಂದಿಗಳನ್ನ ಗೌರವಿಸಿ ಬಾಗಿನ ನೀಡುತ್ತಿರುವುದು ಅರ್ಥಪೂರ್ಣವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧಾರ್ಮಿಕ ಪರಂಪರೆ ಉಳಿಯಬೇಕಾದರೆ ಪರಿಸರ ಸಂರಕ್ಷಣೆಯೂ ಬಹಳ ಮುಖ್ಯ ಎಂದು ತಿಳಿಹೇಳಿದರು.
ಮಹಿಳೆಯರಲ್ಲಿ ಧರ್ಮ ಜಾಗೃತಿ ಮತ್ತು ಧಾರ್ಮಿಕ ಸಾಮರಸ್ಯದ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಬಾಗಿನ ಸಮರ್ಪಣೆ ಆಯೋಜಿಸುತ್ತಾ ಬಂದಿರುವುದು ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿ ಸೋಮಣ್ಣ, ಪಿ ಆರ್ ಕೆ ಫೌಂಡೇಶನ್ ಅಧ್ಯಕ್ಷ ಅಯ್ಯಪ್ಪ,ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಯುವ ಮುಖಂಡರಾದ ಜಿ ರಾಘವೇಂದ್ರ, ಮಂಜುಳಾ ಸೋಮಣ್ಣ, ರೂಪ ಗೌಡ, ಪಂಚಾಯತ್ ಡೆವಲಪ್ಮೆಂಟ್ ಅಧಿಕಾರಿ ಶೋಭಾ ದಿನೇಶ್, ಶೃತಿ ವಿನೋದ್,ಹೇಮಾ, ರಮ್ಯಾ, ವಿಜಯಲಕ್ಷ್ಮಿ ಅಯ್ಯಂಗಾರ್, ಸುವರ್ಣ, ರಾಧಾ ಮತ್ತಿತರರು ಹಾಜರಿದ್ದರು.
