ಮೈಸೂರು: ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ
ಬಿ.ಎಸ್.ಯಡಿಯೂರಪ್ಪ,
ಮಾಜಿ ಸಚಿವ ಸಿ.ಟಿ.ರವಿ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ,ಸರ್ಕಾರ ಹಾಗೂ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ಮಾತನಾಡಿ, ಬಂಗಾರಪ್ಪನವರ ತರ ನೀರು ಬಿಡದೆ ಡಿ.ಕೆ.ಶಿವಕುಮಾರ್ ಸೆಡ್ಡು ಹೊಡೆಯಬೇಕು.ಸರ್ಕಾರದ ಜೊತೆ ನಾವು ಇರುತ್ತೇವೆ. ಡಿ.ಕೆ.ಶಿವಕುಮಾರ್ ತಮಿಳುನಾಡಿನ ವಾಟರ್ ಮ್ಯಾನ್ ಆಗಬಾರದು ಎಂದು ಹೇಳಿದರು.
ನೀವು ರಾಜ್ಯದ ಹಿತ ಕಾಯಲು ಸಿಎಂ ಆಗಿದ್ದೀರ ಎಂಬುದನ್ನು ಮರೆಯಬಾರದು,ಮೊದಲು ಕೆ.ಆರ್.ಎಸ್ ನಲ್ಲಿ ಕುಡಿಯುವ ನೀರು ಎಷ್ಟಿದೆ ಎಂದು ಬಹಿರಂಗಪಡಿಸಿ. ನಮಗೇ ನೀರಿಲ್ಲದ ಮೇಲೆ ಅವರಿಗೆ ಹೇಗೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸಂಪುಟ ವಿಸ್ತರಣೆ ವಿಳಂಬ ಕುರಿತು ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ನಾಯಕರನ್ನು ಜೀತದಾಳುಗಳಂತೆ ನೋಡುತ್ತಿದೆ. ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ತಿಂಗಳುಗಟ್ಟಲೇ ಹೈಕಮಾಂಡ್ ಬಾಗಿಲು ಕಾಯುತ್ತಿದ್ದಾರೆ. ಇದು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿಲ್ಲವೇ, ಹೈಕಮಾಂಡ್ಗೆ ಸಡ್ಡು ಹೊಡೆಯಿರಿ ಎಂದು ಸಲಹೆ ನೀಡಿದರು
ಬಿ.ವೈ.ವಿಜಯೇಂದ್ರ ಮಾತನಾಡಿ, ಸಿಎಂ ಭಾನುವಾರ ಸರ್ವಪಕ್ಷ ಸಭೆ ಕರೆಯುತ್ತಿರುವುದು ನಾಟಕ,ಏಪ್ರಿಲ್-ಮೇ ತಿಂಗಳಲ್ಲೇ ನೀರು ಹಿಡಿದಿಟ್ಟುಕೊಳ್ಳಬೇಕಿತ್ತು. ಕುರ್ಚಿ ಜಗ್ಗಾಟದಲ್ಲಿ ಮುಳುಗಿದ ಸರ್ಕಾರಕ್ಕೆ ನೀರಿನ ಬಗ್ಗೆ ಯೋಚನೆಯೇ ಬರಲಿಲ್ಲ. ಆಗ ಎಲ್ಲಾ ನೀರು ಬಿಟ್ಟು ಈಗ ಸಂಕಷ್ಟ ಸೃಷ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಚಿವ ಸಂಪುಟ ವಿಸ್ತರಣೆ ಮಾಡುವುದರಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ರಾಜಕಾರಣ ಬಿಟ್ಟು ನೀರಿನ ವಿಚಾರದಲ್ಲಿ ವಕೀಲರನ್ನು ಭೇಟಿ ಮಾಡಲು ಅವರಿಗೆ ಸಮಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರೈತರ ಹಿತ ಕಾಯಲು ಸರ್ಕಾರ ಬದ್ಧರಾಗಬೇಕು. ಸರ್ಕಾರ ತಕ್ಷಣವೇ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದರು.
