ಮೈಸೂರು: ಅಯೋಧ್ಯೆಯ ಭವ್ಯ ಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗಿ ಎರಡು ವರ್ಷಗಳು ಪೂರೈಸಿದ ಐತಿಹಾಸಿಕ ಸಂದರ್ಭವನ್ನು ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಅತ್ಯಂತ ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು.
ನಗರದ ಚಾಮುಂಡಿಪುರಂ ವೃತ್ತದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ, ಶ್ರೀರಾಮನ ಭವ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಶತಮಾನಗಳ ಕಾಯುವಿಕೆಯ ನಂತರ ನನಸಾದ ಅಯೋಧ್ಯಾ ರಾಮ ಮಂದಿರದ ಕನಸು ಮತ್ತು ಈ ಎರಡು ವರ್ಷಗಳ ಪಯಣವನ್ನು ಸ್ಮರಿಸಿದ ಭಕ್ತರು ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಭಕ್ತಿಭಾವ ಮೆರೆದರು.
ಪೂಜಾ ಕಾರ್ಯದ ನಂತರ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆ.ಆರ್. ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಗೋಪಾಲ ರಾಜೇ ಅರಸ್, ಬಿಜೆಪಿ ಮುಖಂಡರಾದ ಜೋಗಿ ಮಂಜು, ಬಳಗದ ಅಧ್ಯಕ್ಷರಾದ ಸಂದೀಪ್ ಚಂದ್ರಶೇಖರ್, ಮುಖಂಡರಾದ ಬಸವರಾಜ, ಕಿರಣ್, ಮೋಹನ್, ಮಲ್ಲೇಶ್, ಕುಶಾಲ್, ಮಹೇಶ್ ಅರಸ್, ಭಾನು, ಶೇಖರ್, ಶಿವಪ್ರಸಾದ್, ರಾಘವೇಂದ್ರ, ರಘು ರಾಮ್ ಅರಸ್, ಪ್ರಭುಶಂಕರ್, ಅಜ್ಗರ್, ಸುರೇಶ್, ಕುಮಾರ್, ರಾಜೇಂದ್ರ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
