ಹುಣಸೂರು: ಹುಣಸೂರು ತಾಲೂಕು ಹೊನಿಕುಪ್ಪೆ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣಕ್ಕೆ ಹೊಂದಿಕೊಂಡಂತೆ ದೊಡ್ಡ ಹಳೆಯ ಅರಳಿ ಮರ (ವೃಕ್ಷ) ಇದೆ.
ಪ್ರಸ್ತುತ ಈ ಮರದ ಕೊಂಬೆಗಳು ಅತಿಯಾಗಿ ಬೆಳೆದು,ಶಾಲೆಯ ಕಟ್ಟಡದ ಮೇಲಕ್ಕೆ ಮತ್ತು ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡಲಾಗಿ ಚಾಚಿಕೊಂಡಿವೆ.
ಜೋರಾಗಿ ಗಾಳಿ-ಮಳೆ ಬಂದಾಗ ಈ ಕೊಂಬೆಗಳು ಮುರಿದು ಬೀಳುವ ಭೀತಿ ಇದೆ. ಇದರಿಂದ ಇಲ್ಲಿ ಓಡಾಡುವ ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಆಟವಾಡುವ ಮಕ್ಕಳ ಸುರಕ್ಷತೆಗೆ ಹಾಗೂ ಆರೋಗ್ಯಕ್ಕೆ ದೊಡ್ಡ ಅಪಾಯ ಎದುರಾಗಿದೆ.
ಜತೆಗೆ ಈ ಮರದಲ್ಲಿ ಪಕ್ಷಿಗಳು ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ವಾಸ ಮಾಡುತ್ತಿವೆ.ಸದಾ ಹಿಕ್ಕೆ ಹಾಕಿ ಗಲೀಜು ಮಾಡುತ್ತವೆ.ಇದರಿಂದ ಕೆಟ್ಟ ವಾಸನೆ ಹರಡಿ ಶಾಲೆಯ ಮಕ್ಕಳು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ಹುಣಸೂರು ತಾಲೂಕು ಅಧ್ಯಕ್ಷ ಹಾಗೂ ಗ್ರಾಮದ ವಾಸಿ ಚೆಲುವರಾಜು ವರ್ಷಿಣಿ ನ್ಯೂಸ್ ಪೋರ್ಟಲ್ ಗೆ ಅಳಲು ತೋಡಿಕೊಂಡಿದ್ದಾರೆ.
ಯಾವುದೇ ರೀತಿಯ ಅನಾಹುತಗಳು ಸಂಭವಿಸುವ ಮುನ್ನ, ಮರಕ್ಕೆ ಯಾವುದೇ ಹಾನಿ ಮಾಡದಂತೆ ಕೇವಲ ಅಪಾಯಕಾರಿ ಯಾಗಿರುವ ಕೊಂಬೆಗಳನ್ನು ಮಾತ್ರ ಕತ್ತರಿಸಿ ತೆರವುಗೊಳಿಸಲು ಸೂಕ್ತ ಅನುಮತಿ ನೀಡಬೇಕೆಂದು ಚೆಲುವರಾಜು ಅವರು ಉಪ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
