ಲೆಬನಾನ್: ಲೆಬನಾನ್ನ ಬಾಲ್ಬೆಕ್ ಮತ್ತು ಬೆಕಾ ಕಣಿವೆಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, 50 ಕ್ಕೂ ಹೆಚ್ಚು ನಾಗರೀಕರು ಮೃತಪಟ್ಟಿದ್ದಾರೆ.
50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರೆ ಕೆಲವರು ನಾಪತ್ತೆಯಾಗಿದ್ದಾರೆ.
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಬಾಲ್ಬೆಕ್ನಲ್ಲಿ ಯಾವುದೇ ಮುನ್ನೆಚ್ಚರಿಕೆ ನೀಡದೆ ಈ ದಾಳಿ ನಡೆಸಲಾಗಿದೆ.
ಇಂದಿನವರೆಗೂ ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್ ಹಾಗೂ ಬೆಕಾ ಕಣಿವೆಯ ಮೇಲೆ ನಿರಂತರವಾಗಿ ಜಂಟಿ ವೈಮಾನಿಕ ಮತ್ತು ಭೂಸೇನಾ ದಾಳಿಗಳನ್ನು ನಡೆಸುತ್ತಿದೆ.
ದಕ್ಷಿಣ ಲೆಬನಾನ್ನ ನಬತಿಯೆಹ್, ಬಿಂಟ್ ಜ್ಬೈಲ್ ಮತ್ತು ಮರ್ಜಾಯೂನ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇಸ್ರೇಲ್ ಪಡೆಗಳು ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸಿ ದಾಳಿ ಮಾಡಿದ್ದರಿಂದ ನೂರಾರು ವಸತಿ ಗೃಹಗಳು ಹಾಗೂ ವಿಲ್ಲಾಗಳನ್ನು ಸಂಪೂರ್ಣವಾಗಿ ನೆಲಸಮವಾಗಿವೆ.
ಐತಿಹಾಸಿಕ ಮತ್ತು ಯುನೆಸ್ಕೋ ಮಾನ್ಯತೆ ಪಡೆದ ಬಾಲ್ಬೆಕ್ ವಲಯದಲ್ಲೂ ಯಾವುದೇ ಮುನ್ನೆಚ್ಚರಿಕೆ ನೀಡದೆ ಇಸ್ರೇಲ್ ಯುದ್ಧ ವಿಮಾನಗಳು ಬಾಂಬ್ ಮಳೆ ಸುರಿಸಿದೆ.
