ಹುಣಸೂರು: ಹುಣಸೂರು ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸರಿಯಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುವುದಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಜತೆ ಈ ಆರೋಪ ಮಾಡಿದ ಅವರು, ಹುಣಸೂರು ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಲು ಯಾರು ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ಈ ಕಾರ್ಯಾಲಯಕ್ಕೆ ಹೋಗಿದ್ದೆವು ಆದರೆ ಅಲ್ಲಿ ಯಾವುದೇ ಸಿಬ್ಬಂದಿ ಮತ್ತು ಅಧಿಕಾರಿಗಳು ಇರಲಿಲ್ಲ ಒಂದಿಬ್ಬರು ಮಾತ್ರ ಕುಳಿತಿದ್ದರು ಅವರನ್ನು ಕೇಳಿದರೆ ಒಬ್ಬರು ಉಡಾಫೆ ಉತ್ತರ ನೀಡಿದರೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹುಣಸೂರು ತಾಲೂಕು ಪಂಚಾಯಿತಿ ಕಾರ್ಯಾಲಯ ದೊಡ್ಡದು, ತಾಲೂಕಿನಾ ದ್ಯಂತ ಪ್ರತಿದಿನ ನೂರಾರು ಮಂದಿ ಸಮಸ್ಯೆ ಬಗೆಹರಿಸಿಕೊಳ್ಳಲು ಈ ಕಾರ್ಯಾಲಯಕ್ಕೆ ಬರುತ್ತಾರೆ, ಆದರೆ ಇಲ್ಲಿ ಸರಿಯಾಗಿ ಸಿಬ್ಬಂದಿಗಳು, ಅಧಿಕಾರಿಗಳು ಸಿಗುವುದಿಲ್ಲ ನಮ್ಮ ಸಮಸ್ಯೆಯನ್ನು ಆಲಿಸುವವರು ಯಾರು? ಯಾರು ಇದನ್ನು ಸರಿಪಡಿಸುವುದು ಯಾರು ಎಂದು ಖಾರವಾಗಿ ಚೆಲಯವರಾಜು ಪ್ರಶ್ನಿಸಿದರು.
ಇಂದು ಮಧ್ಯಾಹ್ನ 2 ಗಂಟೆಯಿಂದ ನಾಲ್ಕು ಗಂಟೆವರೆಗೂ ಈ ಕಾರ್ಯಾಲಯದಲ್ಲಿ ಅಧಿಕಾರಿಗಳು ಸಿಬ್ಬಂದಿಗಾಗಿ ನಾವು ಕಾಯುತ್ತಾ ಕುಳಿತಿದ್ದೆವು. ಆದರೆ ಯಾರು ಅಲ್ಲಿಯತನಕ ಬರಲೇ ಇಲ್ಲ ಇದು ಒಂದು ದಿನದ ಸಮಸ್ಯೆ ಇಲ್ಲ ಪ್ರತಿದಿನವೂ ಹೀಗೆ ಆಗುತ್ತದೆ ಒಮ್ಮೊಮ್ಮೆ ಬೆಳಿಗ್ಗೆ ಕೂಡ ಇದೇ ಕಥೆ ಯಾಗಿರುತ್ತದೆ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಚೆಲುವರಾಜು ಎಚ್ಚರಿಸಿದ್ದಾರೆ.
