ಮೈಸೂರು: ಮೈಸೂರಿನ ಪ್ರಸಿದ್ಧ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥರಾದ ಪರಮಪೂಜ್ಯ ಶ್ರೀ ಬಾಷಮ್ ಸ್ವಾಮೀಜಿಯವರು ಆರ್ಟಿಐ ಮಾಹಿತಿ ಪತ್ರಿಕೆಯ ಮುಂದಿನ ನಡೆಗೆ ಶುಭ ಹಾರೈಸಿದರು.
ಪತ್ರಿಕೆಯು ಜನಸಾಮಾನ್ಯರಿಗೆ ಸತ್ಯ, ನ್ಯಾಯ ಹಾಗೂ ಸಾರ್ವಜನಿಕ ಮಾಹಿತಿಯನ್ನು ತಲುಪಿಸುವ ಕಾರ್ಯದಲ್ಲಿ ಯಶಸ್ಸು ಕಾಣಲಿ ಎಂದು ಆಶೀರ್ವದಿಸಿದರು.
ಸಮಾಜದಲ್ಲಿ ಜಾಗೃತಿ ಮೂಡಿಸುವ, ಜನರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಪಾರದರ್ಶಕ ಆಡಳಿತಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಪತ್ರಿಕೆಯ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಸ್ವಾಮೀಜಿಯವರು ಶುಭ ಹಾರೈಸಿದರು.
ಆರ್ಟಿಐ ಮಾಹಿತಿ ಪತ್ರಿಕೆ ಬಳಗ ಶ್ರೀ ಬಾಷಮ್ ಸ್ವಾಮೀಜಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸಿದೆ.
