ಮೈಸೂರು: ಮೈಸೂರು ದಸರಾ ಜಂಬೂಸವಾರಿ ವೀಕ್ಷಿಸಲು ಬಂದ ಸಾವಿರಾರು ಪ್ರವಾಸಿಗರು ಅರಮನೆಯಲ್ಲಿ ತಿಂಡಿ ತಿನಿಸುಗಳ ಪಟ್ಟಣಗಳು, ವಾಟರ್ ಬಾಟಲ್ಸ್ ಮತ್ತಿತರ ತ್ಯಾಜ್ಯ ಬಿಸಾಡಿ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈಸೂರಿನ ಸ್ವಚ್ಚರಾಯ ಬಾರಿ ಹಾಗೂ ಖ್ಯಾತ ನಟ ವಸಿಷ್ಠ ಸಿಂಹ ಅವರು ಅರಮನೆ ಆವರಣದ ಸ್ವಚ್ಛತೆಗೆ ಇಳಿದು ಇತರರಿಗೆ ಪ್ರೇರೇಪಣೆ ನೀಡಿದರು.
ಈ ವೇಳೆ ಮಾತನಾಡಿದ ವಸಿಷ್ಠ ಸಿಂಹ ಅವರು ಮೈಸೂರು ದಸರಾ ಜಂಬೂಸವಾರಿ ವೀಕ್ಷಣೆಗೆ ಬಂದಿದ್ದು ನಮ್ಮ ಪುಣ್ಯ,ಬಾರದೆ ಹೋಗಿದ್ದರೆ ಇಂತಹ ಒಂದು ಸೌಭಾಗ್ಯವನ್ನು ಕಳೆದುಕೊಂಡು ಬಿಡುತ್ತಿದ್ದೆ ಎಂದು ಹೇಳಿದರು.
ಸುಂದರ ಮೈಸೂರನ್ನು ಸ್ವಚ್ಛ ಮಾಡುವುದು ನಮ್ಮ ನಿಮ್ಮ ಎಲ್ಲರ ಜವಾಬ್ದಾರಿ, ಸ್ವಚ್ಛತಾ ಮೈಸೂರು ರಾಯಭಾರಿಯಾಗಿ ಅರಮನೆ ಆವರಣದಿಂದ ಸ್ವಚ್ಛತೆಯನ್ನು ಆರಂಭಿಸಿದ್ದು ಬನ್ನಿಮಂಟಪದ ವರೆಗೂ ಸಾಗುತ್ತೇವೆ, ಈ ಕಾರ್ಯ ಮುಂದುವರಿಯುತ್ತಾ ಹೋಗುತ್ತದೆ ನಮ್ಮೊಂದಿಗೆ ಇತರರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮೈಸೂರಿಗೆ ಸ್ವಚ್ಛ ನಗರ ಎಂದು ಹೆಸರು ಇದೆ ನಿಮ್ಮ ಪರಿಸರ, ಮನೆಯ ಅಕ್ಕ-ಪಕ್ಕ ಎಲ್ಲಾದರೂ ಕಸ,ತ್ಯಾಜ್ಯ ಕಂಡರೆ ತೆಗೆದು ನಗರವನ್ನು ಸುಂದರಗೊಳಿಸಲು ಪೌರಕಾರ್ಮಿಕರು ಹಗಲು ಇರುಳು ಶ್ರಮಿಸುತ್ತಾರೆ ಅವರಿಗೆ ನಾವು ಸಹಾಯ ಮಾಡುವುದು ಒಳಿತು ಎಂದು ಹೇಳಿದರು.
ಕಳೆದ ಮೂರು ನಾಲ್ಕು ವರ್ಷದಿಂದ ಸ್ವಚ್ಛ ದಸರಾ ಅಭಿಯಾನ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಸ್ವಚ್ಛ ದಸರಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಬಹಳ ಹೆಮ್ಮೆಯ ವಿಷಯವಾಗಿದೆ, ನಗರದ ಸ್ವಾಸ್ತ್ಯ ಆರೋಗ್ಯ ಸ್ವಚ್ಛತೆ ಕಾಪಾಡಲು ಈ ಅಭಿಯಾನ ಅತ್ಯುತ್ತಮವಾದದ್ದು ಎಂದು ವಸಿಷ್ಠ ಸಿಂಹ ಹೇಳಿದರು.
