ಮೈಸೂರು: ನಾಡಹಬ್ಬ ಮೈಸೂರು ದಸರಾದ ಖಾಸಗಿ ದರ್ಬಾರ್ನ ಪ್ರಮುಖ ಆಕರ್ಷಣೆಯಾದ ಐತಿಹಾಸಿಕ ಜಟ್ಟಿ ಕಾಳಗ ಈ ಬಾರಿ ರದ್ದಾಗಿದೆ!
ಶಮಿ ಪೂಜೆಯಿಂದ ವಾಪಸಾದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಗೆ ಹಿಂತಿರುಗಿದ ಬೆನ್ನಲ್ಲೇ ಜಟ್ಟಿ ಕಾಳಗ ರದ್ದಾಗಿದೆ. ರಾಜ ಮನೆತನದವರನ್ನು ಮನವೊಲಿಸಲು ಯತ್ನ ನಡೆದರೂ ಪ್ರಯೋಜನವಾಗಲಿಲ್ಲ.
ನಿಗದಿತ ಮುಹೂರ್ತ ಮೀರಿದ್ದರಿಂದ ಜಟ್ಟಿ ಕಾಳಗವನ್ನು ರದ್ದುಗೊಳಿಸಲಾಗಿದೆ. ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿರುವುದು ವಿಷಾದನೀಯ.
ಜಟ್ಟಿ ಕಾಳಗ ರದ್ದಾಗಲು ಪೊಲೀಸರ ಅಡಚಣೆಯೇ ಕಾರಣ ಎಂದು ಪೈಲ್ವಾನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಕಾಲಕ್ಕೆ ಪ್ರವೇಶ ಕಲ್ಪಿಸಿದ್ದರೆ ಸಿದ್ಧತೆ ಮಾಡಿಕೊಳ್ಳಬಹುದಿತ್ತು. ಆದರೆ ಪೊಲೀಸರು ಸರಿಯಾದ ಸಮಯಕ್ಕೆ ಒಳಗೆ ಬಿಡದ ಕಾರಣ ಮುಹೂರ್ತ ಮೀರಿತು ಎಂದು ಪೈಲ್ವಾನರು ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಟ್ಟಿ ಕಾಳಗ ನಡೆದು ಒಂದು ಹನಿ ರಕ್ತ ಭೂಮಿಗೆ ಬಿದ್ದನಂತರ ಜಂಬೂ ಸವಾರಿ ಪೂಜೆ ನಡೆಯಬೇಕಿತ್ತು.ಜತೆಗೆ ಇದು ಸಂಪ್ರದಾಯ ಕೂಡಾ.ಆದರೆ ಈ ಬಾರಿ ಎಲ್ಲಾ ಅಯೋಮಯವಾಗಿದೆ.
