ಮೈಸೂರು: ಏಷ್ಯನ್ ಗೇಮ್ಸ್ 2026ರಲ್ಲಿ ಮಹಿಳೆಯರ ವೈಯಕ್ತಿಕ ಗಾಲ್ಫ್ ಸ್ಟ್ರೋಕ್ ಪ್ಲೇಯಲ್ಲಿ ಚಿನ್ನದ ಪದಕ ವಿಜೇತರಾದ ಪ್ರಣವಿ ಶರತ್ ಅರಸ್ ಅವರನ್ನು ಮೈಸೂರಿನಲ್ಲಿ ಗೌರವಿಸಲಾಯಿತು.
ಅವರು ಇಂದು ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರಿವು ಸಂಸ್ಥೆ ವತಿಯಿಂದ ಸನ್ಮಾನಿಸಿ ಸ್ವಾಗತ ಕೋರಿ ಶುಭ ಹಾರೈಸಲಾಯಿತು.
ಪ್ರಣವಿ ಅರಸ್ ಅವರನ್ನು ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ, ನಿರ್ದೇಶಕರಾದ ಜಿ ಎನ್ ಪಂಚಾಕ್ಷರಿ, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಶ್ಯಪ್ ಮತ್ತಿತರರು ಸ್ವಾಗತಿಸಿ ಅಭಿನಂದಿಸಿದರು.
