ಚಾಮರಾಜನಗರ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರ ಎಸ್.ಆರ್. ಪುರುಷೋತ್ತಮ್ ಅವರು ಅಮಾನತು ಗೊಂಡಿದ್ದಾರೆ.
ತಾಲೂಕಿನ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಮಾಡದ ಕಾಮಗಾರಿಗೆ ನಕಲಿ ಬಿಲ್ ಸೃಷ್ಟಿಸಿ, ಗುತ್ತಿಗೆ ‘ದಾರ ಸಂಸ್ಥೆಗೆ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಪಾವತಿಸಿ ಸರ್ಕಾರಕ್ಕೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರ ಎಸ್.ಆರ್. ಪುರುಷೋತ್ತಮ್ ಅವರನ್ನು ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಚಾಮರಾಜನಗರ ತಾಲೂಕಿನ 166
ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ 292.80 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಸಂಬಂಧಿಸಿದಂತೆ ಈ ಹಗರಣ ಬೆಳಕಿಗೆ ಬಂದಿದೆ.
ಹೈದರಾಬಾದ್ ಮೂಲದ ಮೆ॥ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಸಾಸ್ಟಕ್ಟರ್ ಲಿಮಿಟೆಡ್ (MEIL) ಸಂಸ್ಥೆಯು ಈ ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿತ್ತು. ಯೋಜನೆಯ ಒಪ್ಪಂದದ ಪ್ರಕಾರ, ವಿದ್ಯುತ್ ಸಂಪರ್ಕಕ್ಕಾಗಿ 11.50 ಕೋಟಿ ವೆಚ್ಚದಲ್ಲಿ ‘ಪವರ್ ಸಬ್ಸ್ಟೇಷನ್’ ನಿರ್ಮಿ ಸಬೇಕಾಗಿತ್ತು.
ಆದರೆ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲೆಂಟ್ಸ್ ಸಂಸ್ಥೆಯು ಸ್ಥಳ ಪರಿಶೀಲನೆ ನಡೆಸಿ, ಗುತ್ತಿಗೆದಾರರು ಪವರ್ ಸಬ್ಸ್ಟೇಷನ್ ಕಾಮಗಾರಿಯನ್ನೇ ಮಾಡಿಲ್ಲ ಮತ್ತು ಅದರ ಅಗತ್ಯವೂ ಇಲ್ಲ ಎಂದು ವರದಿ ನೀಡಿತ್ತು.ಅಲ್ಲದೆ ಈ ಕಾಮಗಾರಿಗೆ ಹಣ ಪಾವತಿಸದಂತೆ ತೀವ್ರ ಆಕ್ಷೇಪ ವ್ಯಕ್ತಪಡಿ ಸಿತ್ತು.
ಖಾಸಗಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಕರ್ನಾಟಕ ಲೋಕಾ ಯುಕ್ತ ಸಂಸ್ಥೆಯು ಈ ಕುರಿತು ಸಮಗ್ರ ತನಿಖೆ ನಡೆಸಿತ್ತು. ಅಂದಿನ ಕಿರಿಯ ಅಭಿಯಂತರರಾಗಿದ್ದ ಎಸ್.ಆರ್. ಪುರುಷೋತ್ತಮ್ ಅವರು ಸ್ಥಳ ತಪಾಸಣೆ ನಡೆಸದೆಯೇ, ಸಂಸ್ಥೆಯ ಆಕ್ಷೇಪಣೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ತನಿಖೆಯಲ್ಲಿ ಸಾಬೀತಾಗಿದೆ.
ಗುತ್ತಿಗೆದಾರ ಸಂಸ್ಥೆಯೊಂದಿಗೆ ಶಾಮೀಲಾಗಿ, ನಡೆಯದ ಕಾಮಗಾರಿಗೆ ನಕಲಿ ದಾಖಲೆಗಳನ್ನುಸೃಷ್ಟಿಸಿ 11.50 ಕೋಟಿ ಅಕ್ರಮವಾಗಿ ಪಾವತಿಯಾ ಗುವಂತೆ ಮಾಡಿ ಸರ್ಕಾರಕ್ಕೆ ಭಾರಿ ಆರ್ಥಿಕ ನಷ್ಟ ಉಂಟುಮಾಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ.
ಲೋಕಾಯುಕ್ತ ಕಾಯ್ದೆ 1984ರ ಕಲಂ 12(3)ರ ಅಡಿಯಲ್ಲಿ ಲೋಕಾಯುಕ್ತರು ನೀಡಿದ ತನಿಖಾ ವರದಿ ಮತ್ತು ಶಿಸ್ತುಕ್ರಮದ ಶಿಫಾರಸಿನ ಆಧಾರದ ಮೇಲೆ, ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಧಿಕಾರಿಯನ್ನು ಇಲಾಖಾ ವಿಚಾರಣೆಗೆ ಕಾಯ್ದಿರಿಸಿ ಅಮಾನತು ಗೊಳಿಸಿದೆ.
ಅಮಾನತ್ತಿನ ಅವಧಿಯಲ್ಲಿ ಅಧಿಕಾರಿಯು ಸರ್ಕಾರದ ಪೂರ್ವ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
