ವರದಿ. ಎಸ್. ಪುಟ್ಟಸ್ವಾಮಿ ಹೊನ್ನೂರು
ಯಳಂದೂರು : ರೈತರು ಡೈರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಹಾಲು
ಉತ್ಪಾದಕರ ಸಹಕಾರ ಸಂಘದ ಅಭಿವೃಧಿಗೆ ಸಹಕಾರಿಸಬೇಕಂದು ಜಿಲ್ಲಾ ಕುದೇರು ಹಾಲು ಒಕ್ಕೂಟದ ನಿರ್ದೇಶಕ ವೈ.ಸಿ.ನಾಗೇಂದ್ರ ತಿಳಿಸಿದರು.
ಅವರು ತಾಲೂಕಿನ ಹೊನ್ನೂರು ಗ್ರಾಮದ ಹಾಲು ಉತ್ಪಾಸಕರ ಸಹಕಾರ ಸಂಘದ 2025-26 ನೇ ಸಾಲಿನ
ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಹಕಾರ ಸಂಘದಿಂದ
ಗ್ರಾಮೀಣ ಭಾಗದಲ್ಲಿ ರೈತರಿಗೆ ರಾಸುಗಳಿಗೆ ವಿಮೆ, ಮೇವಿನ ಯಂತ್ರಗಳ ಸಹಾಯಧನ,
ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಹಕಾರ ಕ್ಷೇತ್ರ
ಯಶ್ವಸಿಗೊಳಿಸಬೇಕೆಂದು ಸಲಹೆ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ರಾಜಶೇಖರ್ ಮಾತನಾಡಿ, 2025-26 ನೇ ಸಾಲಿನಲ್ಲಿ ಸಂಘವು 503406
ನಿವ್ವಳ ಲಾಭಾಂಶ ಗಳಿಸಿ ಲಾಭದಲ್ಲಿದೆ, ಇದರ ಜತೆಗೆ ಉತ್ಪಾದಕರಿಗೆ 224484 ಲಕ್ಷ
ರೂ.ಗಳ ಬೋನಸ್ ನೀಡಲಾಗುವುದು, ಸಂಘದ ಹೊಸ ಕಟ್ಟಡ ಸಭಾ ಭವನ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ರೇವಣ್ಣ ಮಾತನಾಡಿ ನಮ್ಮ ಅವಧಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮ ಕಾರ್ಯ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದು ಈಗಾಗಲೇ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾ ಭವನ ನಿರ್ಮಾಣ ಮಾಡಲಾಗಿದೆ, ಮೇಲ್ಚಾವಣಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಆ ರೀತಿಯ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಸಂಘಕ್ಕೆ ಬಂದಿರುವ ಲಾಭಾಂಶವನ್ನು ರೈತರಿಗೆ ನೀಡಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಹೆಚ್.ಎಸ್.ರಾಜಪ್ಪ,
ನಿರ್ದೇಶಕರಾದ ಎಂ.ನಂಜುಂಡಯ್ಯ,
ಹೆಚ್.ಎಸ್.ಗುರುಲಿಂಗಪ್ಪ,ರಾಚಯ್ಯ, ಬಿ.ಜಿ.ನಾಗರಾಜು, ಹೆಚ್.ಎನ್. ಬಸವರಾಜು, ಸಿದ್ದರಾಜು, ನಂಜುಂಡಯ್ಯ,
ಬಿ.ಪುಟ್ಟಬಸಮ್ಮ, ನಾಗಮ್ಮ ಜಿಲ್ಲಾ ಹಾಲು ಒಕ್ಕೂಟದ ಪ್ರಭಾರ ವ್ಯವಸ್ಥಾಪಕ ರಾಜು,
ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಗುರುಪ್ರಸಾದ್, ತಾ.ಪಂ.ಮಾಜಿ ಸದಸ್ಯ ನಿರಂಜನ್,
ಹಾಲು ಪರಿವೀಕ್ಷಕ ಎಸ್.ಮಹದೇವಸ್ವಾಮಿ, ಹೆಚ್. ಎಸ್. ರಾಜೇಶ್, ಹೆಚ್. ಎನ್. ಪ್ರಕಾಶ್ ಕುಮಾರ್ ಮತ್ತಿತರರು ಹಾಜರಿದ್ದರು.
