ಮೈಸೂರು: ಎಲ್ಲೆಡೆ ಲಂಚ,ಭ್ರಷ್ಟಾಚಾರ ತೊಲಗಲಿ ಎಂದು ಒತ್ತಾಯಿಸಿ ಇಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ಮೈಸೂರಿನ ಆರ್ ಗೇಟ್ ಬಳಿ ಪ್ರತಿಭಟನೆ ನಡೆಸಿದ ವಾಟಾಳ್,ಭ್ರಷ್ಟಾಚಾರದ
ವಿರುದ್ಧ ವಿದ್ಯಾರ್ಥಿಗಳು, ಯುವ ಜನಾಂಗ ಬೀದಿಗೆ ಬರಬೇಕು. ಪ್ರಜಾಪ್ರಭುತ್ವ ಉಳಿಸುವ ಚಳುವಳಿ ನಡೆಸಬೇಕು ಎಂದು ವಾಟಾಳ್ ನಾಗರಾಜ್ ಕರೆ ನೀಡಿದರು.
ಪಾರ್ಥಸಾರಥಿ, ತೇಜೇಶ್ ಲೋಕೇಶ್ ಗೌಡ, ಸಿಂಧುವಳ್ಳಿ ಶಿವಕುಮಾರ್, ಸಂತೋಷ್, ಶಿವರಾಂ, ರಾಧಾಕೃಷ್ಣ , ಭರತ್, ದರ್ಶನ್ ಗೌಡ, ಕೃಷ್ಣಪ್ಪ, ಹನುಮಂತಯ್ಯ ಮತ್ತಿತರರು
ವಾಟಾಳ್ ಗೆ ಸಾಥ್ ನೀಡಿದರು.
