ಮೈಸೂರು: ನಮ್ಮ ರೂಪನಗರ ನಿವಾಸಿಗಳ ಕಲ್ಯಾಣ ಸಂಘದ ವತಿಯಿಂದ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣೇಶ ಪೂಜೆ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ರೂಪನಗರದ ನಮ್ಮ ವನದಲ್ಲಿ ಹಮಗಮಿಕೊಂಡಿದ್ದ ಕಾರ್ಯಾಗಾರದಲ್ಲಿ
ರೂಪನಗರದ 35 ಕ್ಕೂ ಹೆಚ್ಚು ನಿವಾಸಿಗಳು ಭಾಗವಹಿಸಿ ಜೇಡಿಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ಕಲಿತರು.
ಪರಿಸರ ಸ್ನೇಹಿ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳು ಮತ್ತು ರಾಸಾಯನಿಕ ಬಣ್ಣಗಳನ್ನು ತಪ್ಪಿಸುವ ಮೂಲಕ ನಮ್ಮ ಪರಿಸರ ಮತ್ತು ಭೂಮಿಯನ್ನು ರಕ್ಷಿಸುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಸಂಘಟಕರು ಎಲ್ಲಾ ನಿವಾಸಿಗಳ ಉತ್ಸಾಹಭರಿತ ಭಾಗವಹಿಸುವಿಕೆಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಮುಂಬರುವ ಹಬ್ಬಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲು ಎಲ್ಲರೂ ನಿರ್ಧರಿಸಿದರು.
ನಮ್ಮ ರೂಪನಗರ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷರಾದ ನರಸಿಂಹ ಮೂರ್ತಿ, ಸೋಮಯಾಜಿ, (ಕಾರ್ಯದರ್ಶಿ) ಪ್ರಿಯಾ ಶಶಿಧರನ್, (ಜಂಟಿ ಕಾರ್ಯದರ್ಶಿ) ಸುಷ್ಮಾ ಅಪ್ಪಯ್ಯ, ಶರ್ಮಿಳಾ, ಶ್ರೀಮತಿ ರಾಘವೇಂದ್ರ ಮತ್ತು ಡಾ. ಅನಿಲ್ ಥಾಮಸ್ ಮತ್ತಿತರರು ಪಾಲ್ಗೊಂಡಿದ್ದರು.
