ಮೈಸೂರು: ಲಯನ್ ಕ್ಲಬ್ ಆಫ್ ಮೈಸೂರು ಎಲೆಟ್ ಸಂಸ್ಥೆಯ ಹೇಮಂತ್ ಕುಮಾರ್ ಹಾಗು ಅವರ ಶ್ರೀಮತಿಯವರು ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ತಾಯಂದಿರಿಗೆ
ಒಂದು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥ ಮತ್ತು ನಿತ್ಯ ಬಳಕೆ ವಸ್ತುಗಳನ್ನು ನೀಡಿ ಮಾದರಿಯಾಗಿದ್ದಾರೆ.
ಹೇಮಂತ್ ಕುಮಾರ್ ಹಾಗು ಅವರ ಶ್ರೀಮತಿಯವರು
ಒಂದು ತಿಂಗಳಿಗೆ ಆಗುವಷ್ಟು ಗೋಧಿ ಹಿಟ್ಟ,ಎಣ್ಣೆ ಹಾಗು ಮಸಾಲ ಪದಾರ್ಥಗಳನ್ನು ಹಾಗೂ ದಿನಚರಿಗೆ ಉಪಯೋಗವಾಗುವಂತ ಸೋಪು ಪೇಸ್ಟು ಹಾಗೂ ಇತರೆ ಪದಾರ್ಥಗಳನ್ನು ಇಂದು ನೀಡಿದರು.
ಸಂಸ್ಥೆ ಹಾಗೂ ತಾಯಂದಿರ ಪರವಾಗಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ಅಧ್ಯಕ್ಷರಾದ ಯಾದವ್ ಹರೀಶ್ ಮತ್ತು ಸಹ ಕಾರ್ಯದರ್ಶಿ ರಕ್ತದಾನಿ ಮಂಜು ಅವರು ಲಯನ್ ಕ್ಲಬ್ ಆಫ್ ಮೈಸೂರು ಎಲೆಟ್ ಸಂಸ್ಥೆ ಮಯ ಹೇಮಂತ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
