(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ರಾಜ್ಯದ 224 ಕ್ಷೇತ್ರಗಳ 1625 ಫಲಾನುಭವಿಗಳಿಗೆ ಜೀವನಾದಾರಕ್ಕೆ 42 ಕೋಟಿ ರೂ ವೆಚ್ಚದಲ್ಲಿ ಹೈ-ಟೆಕ್ ಆಟೋಗಳನ್ನು ನೀಡುವ ಫುಡ್ ಕಾರ್ಟ್ ಯೋಜನೆಗೆ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆಯಲಾಗಿದ್ದು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ನರೇಂದ್ರ ಅವರು ತಿಳಿಸಿದರು
ಕೊಳ್ಳೇಗಾಲಕ್ಕೆ ಆಗಮಿಸಿದ್ದ ನರೇಂದ್ರ ಅವರು ಕಾಂಗ್ರೆಸ್ ಮುಖಂಡ ಮುಡಿಗುಂಡ ಶಾಂತರಾಜುರವರ ನಿವಾಸದಲ್ಲಿ ಸುದ್ದಿಗಾರರೊಡನೆ ಮಾತನಾಡಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮೂಲ ನಿಗಮವಾಗಿದ್ದು ಇದು ಎಲ್ಲಾ ನಿಗಮಗಳಿಗೂ ತಾಯಿ ನಿಗಮ ಹಾಗೂ ನಿಗಮಕ್ಕೆ ಬಹಳ ಇತಿಹಾಸದ ನಿಗಮವಾಗಿದೆ ಎಂದು ಬಣ್ಣಿಸಿದರು.
ನಿಗಮಕ್ಕೆ ಅರ್ಜಿ ಸಲ್ಲಿಸಿ ಅರ್ಹ ಫಲಾನುಭವಿಗಳಾಗಿ ಆಯ್ಕೆಯಾದವರಿಗೆ ಸೌಲಭ್ಯ ನೀಡಲಾಗುವುದು. ಗ್ಯಾರಂಟಿ ಯೋಜನೆಗೆ ಸೌಲಭ್ಯ ನೀಡುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಿರಂತರವಾಗಿ ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತವೆ ಆದರೆ ವಿರೋಧಪಕ್ಷಗಳು ಸುಮ್ಮನೆ ಬೊಬ್ಬೆ ಹೊಡೆಯುತ್ತಿವೆ ಎಂದು ದೂರಿದರು.
ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ನಿಗಮದ ಮೂಲ ಯೋಜನೆಗಳಾದ ಉದ್ಯಮಶೀಲತಾ ಯೋಜನೆ, ಸ್ವಯಂ ಉದ್ಯೋಗ ಯೋಜನೆ ಗಂಗಾ ಕಲ್ಯಾಣ ಯೋಜನೆ ಹಾಗೂ ಭೂಒಡೆತನ ಯೋಜನೆಗಳು ಸೇರಿದಂತೆ ಎಲ್ಲಾ ಯೋಜನೆಗಳನ್ನು ನಿರಂತರವಾಗಿ ಜನರಿಗೆ ತಲುಪುತ್ತಿವೆ. ಸರ್ಕಾರ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನೀಡುತ್ತಿರುವ. ಅನುದಾನದಲ್ಲಿ ನಾವು ಜನರಿಗೆ ಬಹಳಷ್ಟು ಸವಲತ್ತುಗಳನ್ನು ನೀಡುತ್ತಾ ಬಂದಿದ್ದೇವೆ
ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ನೀಡುತ್ತಾ ಬಂದಿದ್ದೀವೆ. ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರು ಜನರಿಗೆ ಹೊಸ ಯೋಜನೆಗಳನ್ನು ಕೊಡಬೇಕೆಂಬ ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.
ಈಗಿನ ಪೀಳಿಗೆಗೆ ತಕ್ಕಂತೆ ಹೊಸ ಹೊಸ ಯೋಜನೆಗಳನ್ನು ಲಾಂಚ್ ಮಾಡುತಿದ್ದೇವೆ. ಅದಕ್ಕಾಗಿ ಇಡೀ ರಾಜ್ಯದಲ್ಲಿ ನಾವು ಅನೇಕ ದಲಿತ ಮುಖಂಡರು, ಸಮಾಜದ ಮುಖಂಡರು, ಶಾಸಕರು ಹಾಗೂ ಮಂತ್ರಿಗಳ ಸಭೆಯನ್ನು ಕೂಡ ಕರೆದು ಎಲ್ಲಾ ಅಧಿಕಾರಿಗಳ ಚರ್ಚಿಸಿ ಹೊಸ ಕಾರ್ಯಕ್ರಮಗಳನ್ನು ಲಾಂಚ್ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಅಲ್ಲದೆ ನಾಲ್ಕು ವಿಭಾಗಗಳಲ್ಲೂ ಸಭೆ ಮಾಡಿ ಹೊಸ ಹೊಸ ಯೋಜನೆಗಳನ್ನು ಜನರಿಗೆ ತಲುಪಿಸುವ ಮತ್ತು ಆರ್ಥಿಕವಾಗಿ ಸಬಲರಾಗುವ ಯೋಜನೆಗಳನ್ನು ಜಾರಿಗೆ ತರಬೇಕೆಂದು ನಾವೆಲ್ಲ ನಿಗಮದ ಮಂಡಳಿ (ಬೋರ್ಡ್ ಮೀಟಿಂಗ್) ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಮತ್ತೊಮ್ಮೆ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಮಂತ್ರಿಗಳೊಡನೆ ಚರ್ಚಿಸಿ ಹೊಸ ಯೋಜನೆಗಳನ್ನು ಆದಷ್ಟು ಬೇಗನೆ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು
ಈ ವೇಳೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೊಳ್ಳೇಗಾಲ ತಾಲೂಕು ಅಭಿವೃದ್ಧಿ ಅಧಿಕಾರಿ ಕೇಂದ್ರ ಸ್ಥಾನಕ್ಕೆ ಬರುತ್ತಿಲ್ಲ.ಎಂದು ಕೆಲವರು ದೂರಿದರು
ಇದಕ್ಕೂ ಮೊದಲು ನರೇಂದ್ರ ಅವರು ಪಟ್ಟಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ನಂತರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅಚರು,ಇಲ್ಲಿನ ಅಂಬೇಡ್ಕರ್ ಭವನ ಪೂರ್ಣವಾಗಲು ವಿಶೇಷ ಅನುದಾನ ಕೊಡಿಸುವ ಭರವಸೆ ನೀಡಿದರು. ವಿಶೇಷವಾಗಿ ಯುವಕರಿಗೆ ಇಂಟರ್ನೆಟ್ ಮತ್ತು ಗ್ರಂಥಾಲಯವನ್ನು ನಮ್ಮ ನಿಗಮದಿಂದ ಕೊಡಿಸುವ ಭರವಸೆ ನೀಡಿದರು.
ಈ ವೇಳೆ ನರೇಂದ್ರರವರಿಗೆ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಸನ್ಮಾನಿಸಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಮಾಜಿ ಸದಸ್ಯರಾದ ಮುಡಿಗುಂಡ ಶಾಂತರಾಜು, ಕವಿತಾ ರಾಜೇಶ್, ನಾರಾಯಣ್ ಮತ್ತಿತರರು ಹಾಜರಿದ್ದರು.
