ಕೊಳ್ಳೇಗಾಲ: ಕೊಳ್ಳೇಗಾಲ ಟೌನ್ ಘಟಕದ ಜೆಡಿಎಸ್ ಅಧ್ಯಕ್ಷರಾಗಿ ಭೀಮ ನಗರದ ಎನ್ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕ್ಷೇತ್ರಾಧ್ಯಕ್ಷರಾದ ಬಿ ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುರೇಶ್ ಅವರನ್ನು ಮುಖಂಡರುಗಳ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದಕ್ಕೂ ಮೊದಲು ಜೆಡಿಎಸ್ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಹಲವಾರು ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಭೀಮ ನಗರದ ಎನ್ ಸುರೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಪ್ರಕಟಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅನೇಕ ವಿವಿಧ ವಾರ್ಡ್ ಗಳ ಯುವ ಮುಖಂಡರುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸುರೇಶ್ ಅವರು ತಮ್ಮನ್ನು ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲ ಮುಖಂಡರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನು ಎಲ್ಲರ ಸಹಕಾರ ಮತ್ತು ಬೆಂಬಲದೊಂದಿಗೆ ಸಂಘಟಿಸಿ ಉತ್ತಮ ರೀತಿಯಲ್ಲಿ ಪಕ್ಷವನ್ನು ಮುನ್ನಡೆಸುವುದಾಗಿ ತಿಳಿಸಿದರು.
ಎನ್ ಸುರೇಶ್ ಅವರು ಜೆಡಿಎಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಜೆಡಿಎಸ್ ಕಚೇರಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಸುರೇಶ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಶಿವಮಲ್ಲೇಗೌಡ, ಸಿದ್ದಯ್ಯನಪುರ ರಾಚಯ್ಯ, ಹಿರಿಯ ಮುಖಂಡರಾದ ರಾಜಪ್ಪ, ಮುಸ್ಲಿಂ ಮುಖಂಡರಾದ ಅಕ್ರಂ, ಅಸ್ಗರ್ ಪಾಶ, ನಾಥಿಕ್ ಪಾಷಾ ನಗರಸಭಾ ಮಾಜಿ ಸದಸ್ಯರಾದ ಕೃಷ್ಣನಾಯ್ಕ, ಕವಿತಾ ಪ್ರಸಾದ್, ಭಾಗ್ಯ, ವಿಜಯರಾಣಿ, ಬಸ್ತಿಪುರ ಸೋಮಣ್ಣ, ಭೀಮ ನಗರ ಕುಮಾರ್, ಸುರೇಶ್, ಪ್ರಭಾಕರ್, ಪ್ರತಾಪ್, ಪ್ರದೀಪ್, ರಾಜೇಶ್, ಅಪ್ಪು, ಆನಂದ, ಜ್ಯೋತಿ ಕಾಲೋನಿ ಸುರೇಶ್, ಹೊಸ ಅಣಗಳ್ಳಿ ಆನಂದ್ ಮತ್ತು ಸುಹಾಸ್ ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
