ಯಳಂದೂರು: ಯಳಂದೂರು ತಾಲೋಕಿನ ಮಲಾರಪಾಳ್ಯ ಸಮೀಪದ ತಿಪ್ಪೆಕಟ್ಟೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಶನೇಶ್ವರಸ್ವಾಮಿ, ಶ್ರೀಮುನೇಶ್ವರಸ್ವಾಮಿ ಹಾಗೂ ಶ್ರೀ ಭದ್ರಕಾಳಿಯಮ್ಮ ದೇವಸ್ಥಾನದಲ್ಲಿ 21 ನೆ ವರ್ಷದ ಪೂಜಾ ಕಾರ್ಯಕ್ರಮ ನೆರವೇರಿತು.
ಭಕ್ತಾದಿಗಳು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ತಮ್ಮ ತನು ಮನ ಧನ ಅರ್ಪಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಎಲ್ಲಾ ಸಮುದಾಯಗಳ ಮುಖಂಡರು ಆಗಮಿಸಿ ಶ್ರೀ ಸ್ವಾಮಿಯವರ ದರ್ಶನ ಪಡೆದು
ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಸೋಮಣ್ಣ ಮಾತನಾಡಿ ಈ ದೇವಸ್ಥಾನಕ್ಕೆ ಬಂದು ಶ್ರದ್ಧ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರೆ ಬೇಡಿದ ವರವನ್ನು ಈಡೇರಿಸುತ್ತಾನೆ ಬಂದ ಭಕ್ತಾದಿಗಳಿಗೆ ಎಲ್ಲಾವು ಒಳ್ಳೆಯದೆ ಆಗಿದೆ ಎಂದು ತಿಳಿಸಿದರು.
