ಮೈಸೂರು: ಮೈಸೂರಿನ ಸರಸ್ವತಿಪುರಂ ನಲ್ಲಿರುವ ಶ್ರೀ ಕೃಷ್ಣದಾಮದಲ್ಲಿ ನಾಳೆ ಸೋಮವಾರ ಸಂಜೆ 7 ಗಂಟೆಗೆ ಕಾಂತಾರ ವರಾಹ ರೂಪಂ ಖ್ಯಾತಿಯ ವಿದ್ವಾನ್ ಸಾಯಿ ವಿಘ್ನೇಶ್ ಅವರ ಭಕ್ತಿ ಮಾಧುರ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ಕೃಷ್ಣ ಟ್ರಸ್ಟ್, ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಚಾತುರ್ಮಾಸ್ಯ ಸಮಿತಿ
ವತಿಯಿಂದ ಉಡುಪಿ ಶ್ರೀ ಕಾಣಿಯೂರು ಮಠದ ಪೀಠಾಧಿಪತಿ ಪೂಜ್ಯ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರ 35ನೇ ಚಾತುರ್ಮಾಸ್ಯ ಅಂಗವಾಗಿ ಕಾಂತಾರ ವರಾಹ ರೂಪಂ ಹಾಡಿನ ಖ್ಯಾತಿಯ ವಿದ್ವಾನ್ ಸಾಯಿ ವಿಘ್ನೇಶ್ ಅವರಿಂದ ಭಕ್ತಿ ಮಾಧುರ್ಯ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಪ್ರಕಟಣೆಯ ಮೂಲಕ ಶ್ರೀ ಕೃಷ್ಣ ಟ್ರಸ್ಟ್ ಚಾತುರ್ಮಾಸ್ಯ ಸಮಿತಿಯ ಕಾರ್ಯಾಧ್ಯಕ್ಷ ಪಿ ಎಸ್ ಶೇಖರ್ ಅವರು ಮನವಿ ಮಾಡಿದ್ದಾರೆ.
