ಮೈಸೂರು: ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ ಮೈಸೂರು ವಲಯದ ವತಿಯಿಂದ ಬೋಗಾದಿ ಸಾಯಿ ಸರಸ್ವತಿ ವಿದ್ಯಾಕೇಂದ್ರದ ಆವರಣದಲ್ಲಿ ಸಾಮೂಹಿಕ ಯಜುರುಪಾಕರ್ಮ ಹಮ್ಮಿಕೊಳ್ಳಲಾಯಿತು.
ವಲಯದ ವೈದಿಕ ವಿಭಾಗದ ಮುಖ್ಯಸ್ಥರಾದ ಶಂಭು ಉಪಾಧ್ಯಾಯ ಹಾಗೂ ಶ್ರೀಪಾದ ಭಟ್ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ಉತ್ಸರ್ಜನ ಅಂಗವಾಗಿ ಬಲಿ, ಮಾತಾ-ಪಿತೃ, ಗುರುಗಳ ಸ್ಮರಿಸಿ ಹೋಮ ನೆರವೇರಿಸಿ, ಉಪಾಕರ್ಮ ಅಂಗವಾಗಿ ನೂತನ ಯಜ್ಞೋಪವೀತ ಧಾರಣೆ, ವಿಸರ್ಜನೆ ಹಾಗೂ ಮಹಾತರ್ಪಣ ನಡೆಯಿತು.
ಕಾರ್ಯಕ್ರಮದಲ್ಲಿ ಹವ್ಯಕ ಮಹಾಮಂಡಲದ ಮೈಸೂರು ವಲಯದ ಅಧ್ಯಕ್ಷರಾದ ಜಿ.ಆರ್. ಮೋಹನ್ ಮಂಕಾಳ, ಉಪಾಧ್ಯಕ್ಷರಾದ ಡಿ. ಶಂಕರನಾರಾಯಣ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ಸಂಘಟನಾ ಕಾರ್ಯದರ್ಶಿ ಸಂಪ ಕೃಷ್ಣಮೂರ್ತಿ, ಮುಖಂಡರಾದ ರಾಮಕೃಷ್ಣ ಹೆಗಡೆ ನಿಸ್ರಾಣಿ, ಕೆ.ಎಸ್ ಸದಾಶಿವ, ಗಿರಿಜಾಶಂಕರ್, ಮುರಳಿ, ವಿನಯ್ ಚಂದ್ರ, ಮೋಹನ್ ಪ್ರಶಾಂತ್, ಬಾಲಚಂದ್ರ ಸೇರಿದಂತೆ ಬ್ರಾಹ್ಮಣ ಸಮಾಜದ ಅನೇಕರು ಭಾಗವಹಿಸಿದ್ದರು.
