ಮೈಸೂರು: ಚಿನ್ನ ಗಿರವಿ ಇಟ್ಟುಕೊಂಡು ನೂರಾರು ಗ್ರಾಹಕರಿಗೆ ವಂಚಿಸಿರುವ ಸುಂದರ್ ರಾಜ್ ಅಲಿಯಾಸ್ ಚಿನ್ನತಂಬಿಯ ವಿರುದ್ಧ ಒಂದಲ್ಲಾ ಒಂದು ಆರೋಪಗಳು ಕೇಳಿ ಬರುತ್ತಲೇ ಇದೆ.
ಗ್ರಾಹಕರಿಗೆ ಚಿನ್ನಾಭರಣ ವಂಚನೆ ಮತ್ತು ಕಿರುಕುಳ ನೀಡಿದ ಆರೋಪ ಹೊತ್ತಿರುವ ಚಿನ್ನತಂಬಿ ವಿರುದ್ಧ ಪ್ರತಿದಿನ ಎಫ್ಐಆರ್ ದಾಖಲಾಗುತ್ತಿದ್ದು,ಮತ್ತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಗಂಗೊಂಡನಹಳ್ಳಿ ನಿವಾಸಿ ಗೀತಾ ಹಾಗೂ ತುಮಕೂರಿನ ಕೊರಟಗೆರೆ ಅಗ್ರಹಾರದ ಜಿ.ಆರ್. ಭೀಮೇಶ್ ಮತ್ತು ಅನಿತಾ ಎಂಬುವರು ನೀಡಿದ ದೂರಿನ ಮೇರೆಗೆ ಮೈಸೂರಿನ ನಜರಾಬಾದ್ ಮತ್ತು ಕುವೆಂಪುನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಮಹಿಳೆಯ ಚಿನ್ನ ಕರಗಿಸಿ, ಅಕ್ರಮ ಬಂಧನದಲ್ಲಿಟ್ಟು, ರೌಡಿಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪಗಳು ಕೂಡಾ ಚಿನ್ನತಂಬಿ ಮೇಲಿದೆ.
