ಮೈಸೂರು: ಸ್ವಾತಂತ್ರ್ಯವ ಸಂದರ್ಭದಲ್ಲಿ ನಂಜನಗೂಡು,ದೇವೀರಮ್ಮನಹಳ್ಳಿ
ಅನುರಾಗ ಸೇವಾ ಟ್ರಸ್ಟ್ ನಂಜುಂಡೇಶ್ವರ ಟೌನ್ ಶಿಪ್ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬಸವಪ್ರಾರ್ಥನಾ ಮಂದಿರ ಉದ್ಘಾಟನೆ, ಅನುರಾಗ್ ಮಕ್ಕಳಮನೆ ಹಿರಿಯ ವಿದ್ಯಾರ್ಥಿಗಳ ವೇದಿಕೆ ಮತ್ತು ಶರಣಭಾರತ ದ್ವೖಮಾಸಿಕಪತ್ರಿಕೆ ವಾರ್ಷಿಕೋತ್ಸವ, ಹಾಗು ಶ್ರೀ ಶಿವಬುದ್ಧಿ ಹಲ್ಲರೆಯವರ ವಿರಚಿತ ಗುರುಲಿಂಗಜಂಗಮಗೀತೆ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಸೋಮಹಳ್ಳಿಮಠದ ನಿಯೋಜಿತ ಪೂಜ್ಯರಾದ ಶ್ರೀ ಬಸವಯೋಗಿಪ್ರಭುಸ್ವಾಮಿಗಳ ಸಾನ್ನಿಧ್ಯದಲ್ಲಿ ನೆರವೇರಿದವು.
ನಾಡಿನ ಅನೇಕ ಭಾಗಗಳಿಂದ ಶರಣರು ಬಂದು ಈ ಭಾಗದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿ ಸಮಾಜವನ್ನು ಸುಧಾರಿಸಿದ್ದಾರೆ.ಶ್ರೀ ಗುರುಮಲ್ಲೇಶ್ವರರು ಈ ಭಾಗದಲ್ಲಿ ಪಾದವನ್ನಿಟ್ಟು ಪಾವನವನ್ನಾಗಿ ಮಾಡಿದುದರ ಸಲುವಾಗಿ ಅನುರಾಗ ಸೇವಾ ಟ್ರಸ್ಟ್ ನಂತಹ ಸಂಸ್ಥೆಗಳು ಹುಟ್ಟಿಕೊಂಡಿವೆ, ಇಂತಹ ಸಮಾಜ ಸೇವೆ ಮಾಡುವ ಸೋಮಶೇಖರ್ ರಂತಹ ಮಹನೀಯರು ದೇಶಕ್ಕೆ ಬಹು ಮುಖ್ಯ ಮತ್ತು ಅತ್ಯವಶ್ಯ ಎಂದು ಗುರುಗಳು ಅಭಿಪ್ರಾಯ ಪಟ್ಟರು.
ಹಲ್ಲರೆ ಮಠದ ಶ್ರೀ ಬಸವಣ್ಣಸ್ವಾಮಿಗಳು ಸಮ್ಮುಖ ವಹಿಸಿದರೆ, ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಡಿ. ಎಸ್. ಗುರು ಅವರು ವಹಿಸಿದ್ದರು.
ಬಸವಧರ್ಮಪೀಠ ಕೂಡಲಸಂಗಮ ಸಂಚಾಲಕರಾದ ಮೖಸೂರಿನ ಶರಣೆ ರತ್ನಮ್ಮ ಜಯಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶರಣ ದೇವರಾಜ್ ಪಿ. ಚಿಕ್ಕಹಳ್ಳಿ, ಪ್ರಾಂಶುಪಾಲರು, ಶಿಕ್ಷ ಪದವಿ ಪೂರ್ವ ಕಾಲೇಜು ವರಕೋಡು ಗುರುಲಿಂಗಜಂಗಮ ಕೃತಿ ಬಿಡುಗಡೆಮಾಡಿ ಕೃತಿಯನ್ನು ಪರಿಚಯಿಸಿದರು.
ಧಾರವಾಡದ ಶ್ರೀ ಸದ್ಗುರು ಹೆರಿಟೇಜ್ ಫೌಂಡೇಶನ್ ಸ್ಥಾಪಕ ಶ್ರೀ ಶಿವಪುತ್ರಪ್ಪ ಸಾಹುಕಾರ್ ಅವರು ಶರಣಭಾರತ ಪತ್ರಿಕೆ ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಮೖಸೂರಿನ ಸ್ಮೖಲಿಂಗ್ ಹೋಮ್ಸ್ ನ ಬಿ. ಶಶಿಧರರೆಡ್ಡಿ ಹಾಗೂ ಮೖಸೂರಿನ ಅಗಾಮಿನ್ ಇನ್ನೋವೇಷನ್ಸ್ ನ, ಸಿಇಒ.ಶ್ರೀಷಡಾಕ್ಷರಿ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ಅನುರಾಗ್ ಸೇವಾ ಟ್ರಸ್ಟ್ ನ, ಸ್ಥಾಪಕ ಡಿ. ಜಿ. ಸೋಮಶೇಖರಮೂರ್ತಿ ಹಾಗು ಗುರುಲಿಂಗಜಂಗಮ ಕೃತಿಯ ಲೇಖಕರಾದ ಶಿವಬುದ್ಧಿ ಹಲ್ಲರೆ ಹಾಗೂ ಕಾಯಕ ಕ್ರಿಯೇಶನ್ಸ್ ನ ಪೂರಿಗಾಲಿ ಮರಡೇಶ ಮೂರ್ತಿಯವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನೖಸರ್ಗಿಕ ಕೃಷಿಕರಾದ ಪ್ರಭುಸ್ವಾಮಿ ಹೊಸಕೋಟೆ, ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಶ್ರೀ ಉಡಿಗಾಲ ಪ್ರಕಾಶ್, ನಂಜನಗೂಡು, ಶರಣತತ್ವ ಚಿಂತಕರಾದ ಬಸವಣ್ಣ ಬೊಮ್ಮಲಾಪುರ, ಹಾಗು ಶರಣತತ್ವ ಚಿಂತಕರಾದ ನಂಜನಗೂಡಿನ ಶರಣೆ ರೂಪ ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಯಿತು.
ಶ್ರೀ ಶಿವಬುದ್ಧಿ ಹಲ್ಲರೆ. ಬಸವಣ್ಣ ಹಲ್ಲರೆ. ಮಾದಪ್ಪ ಕಮರಹಳ್ಳಿ. ಕೆ, ಆನಂದ್ ಕುಮಾರ್ ಕಂಬಳಿಹಾಳ್. ಎಚ್. ಬಿ. ವೀರಭದ್ರಸ್ವಾಮಿ ಹಗಿನವಾಳು. ಅವರುಗಳು ವಚನಗಾಯನವನ್ನು ನಡೆಸಿಕೊಟ್ಟರು.
ಉಪನ್ಯಾಸಕಿ ಯೋಗೇಶ್ವರಿ ಪರಮೇಶ್ ರವರು ನಿರೂಪಣೆ ಮಾಡಿದರು. ಹಿರಿಯ ವಿದ್ಯಾರ್ಥಿ ವೃಷಭೇಂದ್ರ ವಂದನಾರ್ಪಣೆ ನಡೆಸಿಕೊಟ್ಟರು.
